ಕುಮಟಾ;ತಾಲೂಕಿನ ಗೋಕರ್ಣ ಸಾ. ಬಂಗ್ಲೇಗುಡ್ಡ ಇಲ್ಲಿನ ಡಿಂಪಲ್ ಕುಮಾವನ್ ಗೋಸ್ವಾಮಿ (23ವರ್ಷ) ಇವರು ಫೆ. 22 ರಂದು ಸಂಜೆ 5 ಗಂಟೆಗೆ ತನ್ನ ಮಗಳು ನಿಧಿಯೊಂದಿಗೆ ಎಲ್ಲಿಯೊ ಹೋಗಿ ಈವರೆಗೂ ಮನೆಗೂ ಮರಳಿ ಬಾರದೇ ಕಾಣೆಯಾಗಿದ್ದಾರೆ.
ಮಹಿಳೆಯ ಚಹರೆ: ಗೋದಿ ಮೈ ಬಣ್ಣ, ದುಂಡನೆಯ ಮುಖ, ಸಾಧಾರಣ ಮೈಕಟ್ಟು, 5.3 ಅಡಿ ಎತ್ತರ, ಎಡ ಕಣ್ಣಿನ ರೆಪ್ಪೆ ಮೇಲೆ ಮಚ್ಚೆ ಇರುತ್ತದೆ. ಹಿಂದಿ, ಕನ್ನಡ ಮತ್ತು ಮಾರವಾಡಿ ಭಾಷೆ ಮಾತನಾಡುತ್ತಾಳೆ, ಪಿಂಕ್ ಕಲರ್ ಬ್ಲೂ ಪ್ಯಾಂಟ್ ಚೂಡಿದಾರ ಧರಿಸಿರುತ್ತಾಳೆ.
ಮಗಳÀ ಚಹರೆ: ನಿಧಿ (ಮೂರುವರೆ ವರ್ಷ) ಗೋಧಿ ಮೈ ಬಣ್ಣ, ದುಂಡನೆಯ ಮುಖ, ಸಾಧಾರಣ ಮೈಕಟ್ಟು, 3 ಅಡಿ ಎತ್ತರ, ಹಸಿರು ಬಣ್ಣದ ಫ್ರಾಕ್ ಧರಿಸಿರುತ್ತಾಳೆ.
ಇವರು ಸಾರ್ವಜನಿಕರಿಗೆ ಕಂಡು ಬಂದಲ್ಲಿ ಗೋಕರ್ಣ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಗೋಕರ್ಣ ಪೊಲೀಸ್ ಠಾಣೆಯ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.