ಸಿದ್ದಾಪುರ: ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಅರಣ್ಯವಾಸಿಗಳಿಗೆ ಕಾನೂನು ಜಾಗೃತ ಜಾಥ-೨೦೨೫ರ ಅಂಗವಾಗಿ ಜಾಗೃತ ಕಾನೂನು ಕರಪತ್ರವನ್ನು ಹಿರಿಯ ಸಾಮಾಜಿಕ ಚಿಂತಕ ಡಾ.ಕಾಗೋಡ ತಿಮ್ಮಪ್ಪ ಬಿಡುಗಡೆಗೊಳಿಸಿದರು.
ಅವರು ಫೆ.೧೩ ರಂದು ಸಾಗರದ ಸ್ವಗೃಹದಲ್ಲಿ ರಾಜ್ಯಾದಂತ ಅರಣ್ಯವಾಸಿಗಳಿಗೆ ಕಾನೂನಿನ ಅಂಶವನ್ನ ಹೊಂದಿರುವ ಕರಪತ್ರವನ್ನು ಬಿಡುಗಡೆಗೊಳಿಸಿದರು.
ಅರಣ್ಯ ಹಕ್ಕು ಕಾಯಿದೆ ಅನುಷ್ಠಾನದಲ್ಲಿ ವೈಫಲ್ಯದ ಹಿನ್ನಲೆಯಲ್ಲಿ ಅರಣ್ಯವಾಸಿಗಳಿಗೆ ಕಾನೂನು ಭದ್ರತೆ ದೃಷ್ಟಿಯಿಂದ, ಅರಣ್ಯ ಹಕ್ಕು ಕಾಯಿದೆ ಅನುಷ್ಠಾನದಲ್ಲಿ ಅವಶ್ಯ ಬೇಕಾಗಿರುವ ದಾಖಲೆಗಳು ಮತ್ತು ಮಂಜೂರಿ ಪ್ರಕ್ರಿಯೆಯಲ್ಲಿ ಅರಣ್ಯವಾಸಿಯ ಮೂರು ತಲೆಮಾರಿನ ವಯಕ್ತಿಕ ದಾಖಲೆಗೆ ಒತ್ತಾಯಿಸಲು ಅಥವಾ ಅಪೇಕ್ಷೀಸುವುದು ಕಾನೂನು ಬಾಹಿರ ಸಾಂದರ್ಭಿಕ ದಾಖಲೆ ಅಡಿಯಲ್ಲಿ ಅರಣ್ಯ ಭೂಮಿಯ ಸಾಗುವಳಿ ಹಕ್ಕು ನೀಡುವ ಕಾನೂನು ಅಂಶಗಳು ಕರಪತ್ರದಲ್ಲಿ ಉಲ್ಲಾಖಿಸಲಾಗಿದೆ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಅರಣ್ಯವಾಸಿಗಳು ಕಾನೂನು ಜ್ಞಾನ ವೃದ್ಧಿಸಿಕೊಳ್ಳಿ:
ತಿಳುವಳಿಕೆ ಕೊರತೆಯಿಂದ ಅರಣ್ಯವಾಸಿಗಳ ವಂಚಿತಗೊಳ್ಳುತ್ತಿದ್ದಾರೆ. ಕಾನೂನಿನ ಜ್ಞಾನ ವೃದ್ಧಿಸಿಕೊಳ್ಳಬೇಕು ಆದ್ದರಿಂದ ಅರಣ್ಯವಾಸಿಗಳು ಕಾನೂನು ಜ್ಞಾನ ವೃದ್ಧಿಸಿಕೊಳ್ಳಿ ಹಾಗೂ ಹೋರಾಟಗಾರರ ವೇದಿಕೆಯ ನೇತೃತ್ವದಲ್ಲಿ ಜರುಗುತ್ತಿರುವ ಅರಣ್ಯವಾಸಿಗಳ ಕಾನೂನು ಜಾಗೃತ ಜಾಥಾ ಬೆಂಬಲಿಸಿ ಎಂದು ಅವರು ಹೇಳಿದರು.
ಬಿಡುಗಡೆಯ ಸಂದರ್ಭದಲ್ಲಿ ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ, ಜಿಲ್ಲಾ ಸಂಚಾಲಕರಾದ ಇಬ್ರಾಹಿಂ ಗೌಡಳ್ಳಿ ಉಪಸ್ಥಿತರಿದ್ದರು.