ಹಳಿಯಾಳ : ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಅಭೂತಪೂರ್ವ ಗೆಲುವು ಸಾಧಿಸಿ, 27 ವರ್ಷಗಳ ಬಳಿಕ ಅಧಿಕಾರದ ಚುಕ್ಕಾಣಿ ಹಿಡಿದ ಹಿನ್ನಲೆಯಲ್ಲಿ ಬಿಜೆಪಿ ಪಕ್ಷದ ವತಿಯಿಂದ ಹಳಿಯಾಳ ಪಟ್ಟಣದ ವನಶ್ರೀ ವೃತ್ತ, ಮಾರ್ಕೆಟ್ ರಸ್ತೆ, ಫಿಶ್ ಮಾರ್ಕೆಟ್ ಮೊದಲಾದ ಕಡೆಗಳಲ್ಲಿ ಶನಿವಾರ ವಿಜಯೋತ್ಸವ ಆಚರಿಸಲಾಯಿತು.
ಪಕ್ಷದ ಕಾರ್ಯಕರ್ತರು ವಿಜಯೋತ್ಸವದಲ್ಲಿ ಭಾಗವಹಿಸಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಸಂತೋಷ ಘಟಕಾಂಬಳೆ, ನಗರ ಘಟಕದ ಅಧ್ಯಕ್ಷರಾದ ತಾನಾಜಿ ಪಟ್ಟೇಕರ, ಪುರಸಭೆ ಸದಸ್ಯರಾದ ಉದಯ ಹೂಲಿ, ಶಾಂತಾ ಹಿರೇಕರ, ಪ್ರಮುಖರಾದ ಯಲ್ಲಪ್ಪ ಹೊನ್ನೋಜಿ, ಸಂತಾನ ಸಾವಂತ, ಹನುಮಂತ ಚಲವಾದಿ, ಉಲ್ಲಾಸ ಬೀಡಿಕರ, ಪ್ರದೀಪ ಹಿರೇಕರ, ಗೋಪಾಲ ಗರಗ, ಪರಶುರಾಮ ಶಹಾಪುರಕರ, ಪುಟ್ಟು ಹುಟಗೀಕರ, ರವಿ ಗೌಳಿ, ಮಂಜುನಾಥ ಗೌಳಿ, ನಾಗರಾಜ ಇಟಗಿ ಮೊದಲಾದವರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.