ಸಿದ್ದಾಪುರ: ತಾಲೂಕಿನ ಸರಕುಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕ ಮಂಜುನಾಥ ಸೀತಾರಾಮ ಹೆಗಡೆ ಉಡುಪಿ ಟೀಚರ್ಸ್ ಬ್ಯಾಂಕಿನ ನಿರ್ದೇಶಕ ಮಂಡಳಿಗೆ ಅವಿರೋಧವಾಗಿ ಭಾನುವಾರ ಆಯ್ಕೆ ಆಗಿದ್ದಾರೆ.
110ವರ್ಷಗಳ ಇತಿಹಾಸ ಹೊಂದಿರುವ ಉಡುಪಿ ಟೀಚರ್ಸ್ ಬ್ಯಾಂಕ್ ವಾರ್ಷಿಕ ಒಂದುಸಾವಿರ ಕೋಟಿ ವಹಿವಾಟು ನಡೆಸುವ ರಾಜ್ಯದ ಪ್ರತಿಷ್ಠಿತ ಬ್ಯಾಂಕ್ ಆಗಿದೆ. ರಾಜ್ಯದ 18ಜಿಲ್ಲೆಗಳಲ್ಲಿ ಬ್ಯಾಂಕ್ ಕಾರ್ಯವ್ಯಾಪ್ತಿ ಇದ್ದು ಉತ್ತರ ಕನ್ನಡದವರೇ ಆದ ಶಿರಾಲಿ ಸುಬ್ಬರಾಯರು ಸ್ಥಾಪಿಸಿದ ಬ್ಯಾಂಕಿನ ನಿರ್ದೇಶಕರಾಗಿ ಆಯ್ಕೆ ಆದ ಮೊದಲಿಗರು ಮಂಜುನಾಥ ಸೀತಾರಾಮ ಹೆಗಡೆ ಅವರಾಗಿದ್ದಾರೆ.
ಉಡುಪಿ ಟೀಚರ್ಸ್ ಬ್ಯಾಂಕ್ ನಿರ್ದೇಶಕ ಮಂಡಳಿಗೆ ಮಂಜುನಾಥ್ ಹೆಗಡೆ
![](https://euttarakannada.in/wp-content/uploads/2025/02/IMG-20250205-WA0202-730x438.jpg)