ಅಂಕೋಲಾ: ಶ್ರೀ ಸಿದ್ದಿವಿನಾಯಕ ಹವ್ಯಕ ಟ್ರಸ್ಟ್ ಹಳವಳ್ಳಿ, ಕಿರಣ ಯುವಕ ಮಂಡಲ ಹಳವಳ್ಳಿ, ಆಶಾ ಯುವತಿ ಮಂಡಲ ಹಳವಳ್ಳಿ ಮತ್ತು ಊರನಾಗರಿಕರು ಹಳವಳ್ಳಿ ಇವರ ಆಶ್ರಯದಲ್ಲಿ ‘ಹಳವಳ್ಳಿ ಆಲೆಮನೆ ಹಬ್ಬ’ ವನ್ನು ಇಂದು ಜ.26, ರವಿವಾರದಂದು ಸಂಜೆ 6.00 ಗಂಟೆಯಿಂದ ಹಳವಳ್ಳಿಯ ಸಾಧನಾ ರೈತ ಸಭಾಭವನದ ಆವಾರದಲ್ಲಿ ಆಯೋಜಿಸಲಾಗಿದೆ.
ಆಲೆಮನೆ ಉತ್ಸವದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಬ್ಬಿನಹಾಲಿನ ಸವಿಯನ್ನು ಆಸ್ವಾದಿಸಲು ಸಂಘಟಕರು ಕೋರಿದ್ದಾರೆ.