ಕಾರವಾರ: ಪ್ರಸಕ್ತ ಸಾಲಿನ ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನ ಹಾಗೂ PM-ABHIM ಕಾರ್ಯಕ್ರಮದಡಿ-ಆಯುಷ್ಮತಿ ಕ್ಲಿನಿಕ್ ಕುಮಟಾದಲ್ಲಿ ಖಾಲಿ ಇರುವ 4 ಸ್ತ್ರೀ ರೋಗ ತಜ್ಞರು, 1 ಮೂಳೆ ಮತ್ತು ಕೀಲು ತಜ್ಞರು, 1 ಶಸ್ತ್ರ ಚಿಕಿತ್ಸಾ ತಜ್ಞರು, 1 ಮಕ್ಕಳ ತಜ್ಞರು, 1 ಚರ್ಮ ರೋಗ ತಜ್ಞರು, 1 ಮನರೋಗ ತಜ್ಞರು, 1 ಕಿವಿ, ಮೂಗು ಮತ್ತು ಗಂಟಲು ತಜ್ಞರ ಹುದ್ದೆಗಳಿಗೆ ಪ್ರಕರಣ/ಗಂಟೆ ಆಧಾರದಲ್ಲಿ ತಾತ್ಕಲಿಕವಾಗಿ ತಜ್ಞ ವೈದ್ಯರ ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಿದೆ.
ವಿದ್ಯಾರ್ಹತೆ:-ಎಂ.ಬಿ.ಬಿ.ಎಸ್ ಉತ್ತೀರ್ಣರಾಗಿರಬೇಕು, ಸ್ನಾತಕೋತ್ತರ ಪದವಿ ಹೊಂದಿರಬೇಕು, ಕಡ್ಡಾಯವಾಗಿ ಇಂಟರ್ನ್ಶಿಪ್ ಪೂರೈಸಿರಬೇಕು ಹಾಗೂ ಕೆ.ಎಮ್.ಸಿ.ಯ ನೋಂದಣಿಯನ್ನು ಹೊಂದಿರಬೇಕು, ಮಾನ್ಯತೆ ಪಡೆದ ವಿದ್ಯಾಲಯದಿಂದ ಕಾನ್ವಕೇಷನ್, ಪದವಿ ಪ್ರಮಾಣ ಪತ್ರ, ಪಿ.ಜಿ. ಪ್ರಮಾಣ ಪತ್ರ ಹೊಂದಿರಬೇಕು.
ಆಸಕ್ತ ಅಭ್ಯರ್ಥಿಗಳು ಕಚೇರಿ ಸಮಯದಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ರೊಳಗಾಗಿ ಜಿಲ್ಲಾ ಆರ್.ಸಿ.ಹೆಚ್.ಅಧಿಕಾರಿಗಳ ಕಚೇರಿಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ:Tel:+917019629664 ನ್ನು ಸಂಪರ್ಕಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.