Slide
Slide
Slide
previous arrow
next arrow

ಪ್ರವೃತ್ತಿಯಿಂದ ವ್ಯಕ್ತಿತ್ವ ಬೆಳೆಯುತ್ತದೆ : ಎಡಿಸಿ ಮುಲ್ಲಾ

300x250 AD

ಕಾರವಾರ: ವ್ಯಕ್ತಿಗಳು ವೃತ್ತಿಗೆ ಒತ್ತುಕೊಡದೆ ತಾವು ಮಾಡುವ ಕಾಯಕವನ್ನು ಶ್ರದ್ಧೆಯಿಂದ ಮಾಡಿದರೆ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬಹುದು ಎಂಬುದಕ್ಕೆ ಅಂಬಿಗರ ಚೌಡಯ್ಯರಂತಹ ಮಹಾನ್ ವ್ಯಕ್ತಿಗಳೇ ಸಾಕ್ಷಿ ಎಂದು ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಹೇಳಿದರು.

ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನಡೆದ ಶ್ರೀ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಅಂಬಿಗರ ಚೌಡಯ್ಯ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ಆಧುನಿಕ ಕಾಲಘಟ್ಟದಲ್ಲಿ ವಚನ ಸಾಹಿತ್ಯವನ್ನು ಅರ್ಥ ಮಾಡಿಸುವವರು ಇರಬೇಕು. ಪ್ರಪಂಚದ ಅನೇಕ ಭಾಷೆಗಳಲ್ಲಿ ವಚನ ಸಾಹಿತ್ಯ ಭಾಷಾಂತರ ಮಾಡುವಂತಾಗಬೇಕು. ಸಮಾಜದಲ್ಲಿನ ಕಂದಾಚಾರ, ಮೂಢನಂಬಿಕೆ ಅನಿಷ್ಠ ಆಚರಣೆಗಳು, ರೂಡಿ, ಸಂಪ್ರದಾಯಗಳನ್ನು ವಚನ ಸಾಹಿತ್ಯದ ಮೂಲಕ ಸಮಾಜದ ಪರಿವರ್ತನೆ ಮಾಡಿದವರು ಅಂಬಿಗರ ಚೌಡಯ್ಯನವರು. ಅವರ ತತ್ವ ಆದರ್ಶಗಳನ್ನು ಇಂದಿನ ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದರು.

300x250 AD

ದೀವಗಿ ಚೇತನಾ ಸೇವಾ ಸಂಸ್ಥೆಯ ಸಂಚಾಲಕಿ ಎ.ಆರ್. ಭಾರತಿ , ಅಂಬಿಗರ ಚೌಡಯ್ಯ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಭಾರತದ ಭೂಮಿಯ ಮಣ್ಣು ಶ್ರೀಗಂಧದ ಪರಿಮಳದಂತೆ. ತಪಸ್ವಿಗಳ ಪುಣ್ಯ ನಾಡಾಗಿದೆ 12ನೇ ಶತಮಾನದಲ್ಲಿ ಆಧ್ಯಾತ್ಮಿಕ ಕ್ರಾಂತಿ ಮಾಡಿದ ಶರಣರು ಪವಿತ್ರ ಮತ್ತು ಅಪವಿತ್ರ ಇರುವ ಕಾಲಮಾನದಲ್ಲಿ ಲಿಂಗ, ಧರ್ಮ, ಜಾತಿ, ವರ್ಣ ಭೇದವನ್ನು ಪ್ರಶ್ನಿಸಿದವರು. ಇಡೀ ವಿಶ್ವವೇ ಒಂದು ಕುಟುಂಬವಾಗಿದೆ. ಎಲ್ಲರ ಧರ್ಮ ಒಂದೇ ಅದುವೇ ಶಾಂತಿ ಮತ್ತು ಸತ್ಯ. ವಿಶ್ವ ಭ್ರಾತೃತ್ವವನ್ನು ಬೆಳೆಸಿದವರು ಪರಮಾತ್ಮ ಒಬ್ಬನೇ ಎಂದು ಸಾರಿದವರು ಅಂಬಿಗರ ಚೌಡಯ್ಯನವರು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಗಲಾ ಎಂ ನಾಯ್ಕ, ಶಿಕ್ಷಕಿ ವನಿತಾ ಶೆಟ್, ಅಂಬಿಗರ ಸಮುದಾಯದ ಬಾಬು.ಜಿ, ಗಣಪತಿ ಮಾಂಗ್ರೆ, ಸರಸ್ವತಿ ವಿದ್ಯಾಲಯ ಮತ್ತು ಹಿಂದೂ ಹೈಸ್ಕೂಲ್‌ನ ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ಮತ್ತಿತರರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top