ಕುಮಟಾ: ತಾಲೂಕಿನ ಮಿರ್ಜಾನಿನ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟಿನ ಆದಿಚುಂಚನಗಿರಿ ಇಂಡಿಪೆಂಡೆಂಟ್ ಪದವಿಪೂರ್ವ ಕಾಲೇಜಿನಲ್ಲಿ ಜ. ೧೯ ರಂದು ಪಿಯುಸಿ ಮೊದಲ ವರ್ಷಕ್ಕೆ ಪ್ರವೇಶ ದಾಖಲಾತಿ ಪರೀಕ್ಷೆಯನ್ನು ಏರ್ಪಡಿಸಲಾಗಿತ್ತು. ಈ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿ ಉತ್ತೀರ್ಣರಾದವರಿಗೆ ವಿಶೇಷವಾದ ಶಿಷ್ಯವೇತನ ನೀಡುವುದರೊಂದಿಗೆ ಪ್ರಥಮ ಪಿಯುಸಿ ತರಗತಿಗೆ ಪ್ರವೇಶ ನೀಡಲಾಗುವುದು . ಈ ಕುರಿತಂತೆ ಅಂದು ನಡೆದ ಪರೀಕ್ಷೆಯಲ್ಲಿ 107 ವಿದ್ಯಾರ್ಥಿಗಳು ಹಾಜರಿದ್ದು ಪ್ರವೇಶ ಪರೀಕ್ಷೆ ಬರೆದರು. ಬಂದಂತಹ ವಿದ್ಯಾರ್ಥಿಗಳಿಗೆ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕ ವರ್ಗ ಹಾಗೂ ಆಡಳಿತ ಮಂಡಳಿಯವರು ಆದರದಿಂದ ಬರಮಾಡಿಕೊಂಡರು. ಮತ್ತು ಕಾಲೇಜಿನ ವಿಶೇಷತೆ ಹಾಗೂ ಮೂಲ ಸೌಕರ್ಯದ ಬಗ್ಗೆ ಎಲ್ಲಾ ಪ್ರಯೋಗಲಯದ ಬಗ್ಗೆ ಮಾಹಿತಿ ನೀಡಿದರು. ಸುಮಾರು ಒಂದೂವರೆ ಗಂಟೆಗಳ ಕಾಲ ನಡೆದ ಪ್ರವೇಶ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ತುಂಬಾ ಉತ್ಸುಕತೆಯಿಂದ ಭಾಗವಹಿಸಿರುವುದು ವಿಶೇಷವಾಗಿತ್ತು.