Slide
Slide
Slide
previous arrow
next arrow

ಜ.23ಕ್ಕೆ ಕ್ಯಾನ್ಸರ್ ಭಯ ನಿವಾರಣಾ ಕಾರ್ಯಾಗಾರ

300x250 AD

ಶಿರಸಿ: ಇಲ್ಲಿನ ಪ್ರಜ್ವಲ ಟ್ರಸ್‌ ಆಶ್ರಯದಲ್ಲಿ ಕ್ಯಾನ್ಸ‌ರ್ ಭಯ ನಿವಾರಣಾ ಕಾರ್ಯಾಗಾರವನ್ನು ಜ.23 ರಂದು ಬೆಳಿಗ್ಗೆ 10 ಗಂಟೆಗೆ ಸಾಲ್ಕಣಿಯ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಏರ್ಪಡಿಸಲಾಗಿದೆ.

ಅದೇ ದಿನ ಮಧ್ಯಾಹ್ನ 3 ಗಂಟೆಗೆ ನಗರದ ಹುಬ್ಬಳ್ಳಿ ರಸ್ತೆಯ ವರಸಿದ್ದಿ ವಿನಾಯಕ ದೇವಸ್ಥಾನ ಸಭಾಭವನದಲ್ಲಿ ಏರ್ಪಡಿಸಲಾಗಿದೆ. ಈ ಎರಡೂ ಕಾರ್ಯಾಗಾರದಲ್ಲಿ ಕ್ಯಾನ್ಸರ್ ರೋಗಿಗಳ ಆಪ್ತ ಸಮಾಲೋಚಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತೆ ಕೃಷ್ಣ ಶಿರೂರ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುವರು. ವರಸಿದ್ದಿ ವಿನಾಯಕ ದೇವಸ್ಥಾನದ ಅಧ್ಯಕ್ಷ ಕೃಷ್ಣ ಎಸಳೆ, ಪ್ರಜ್ವಲ ಟ್ರಸ್ಟ್ ಅಧ್ಯಕ್ಷೆ ಬಿಂದು ಹೆಗಡೆ, ಮಾತೃ ಮಂಡಳಿಯ ಭಾರತಿ ಎಸ್. ಹೆಗಡೆ ಭಾಗವಹಿಸುವರು. ಕಾರ್ಯಾಗಾರದಲ್ಲಿ ಕ್ಯಾನ್ಸರ್, ಮತ್ತಿತರ ರೋಗಿಗಳ ಜೊತೆ ಆಪ್ತ ಸಮಾಲೋಚನೆ ನಡೆಸುವ ಜೊತೆಗೆ ವಿಶೇಷ ರೀತಿಯ ಮುದ್ರಾ ಚಿಕಿತ್ಸಾ ವಿಧಾನವನ್ನು ತಿಳಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗೆ ಮೊ. Tel:+919482111131 ಸಂಪರ್ಕಿಸಬಹುದಾಗಿದೆ.

300x250 AD
Share This
300x250 AD
300x250 AD
300x250 AD
Back to top