ಸಿದ್ದಾಪುರ : ಕರ್ತವ್ಯ ನಿರತ ಪೊಲೀಸ್ ಕಾನ್ಸ್ಟೇಬಲ್ ಮೇಲೆ ಹಲ್ಲೆ ನಡೆಸಿದ ಬೈಕ್ ಸವಾರ ಶಿರಸಿ ತಾಲೂಕಿನ ಗಿಡಮಾವಿನಕಟ್ಟೆಯ ದರ್ಶನ ಅಲಿಯಾಸ್ ಕರಿ ಇಡ್ಲಿ ( 26 )ಎನ್ನುವವನ ವಿರುದ್ಧ ಸಿದ್ದಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ.
ಪಟ್ಟಣದ ರಾಜಮಾರ್ಗದಲ್ಲಿ ಹೊಸ ಬಸ್ ನಿಲ್ದಾಣದ ಕಡೆಗೆ ಬೈಕ್ ಸವಾರ ಬರುತ್ತಿದ್ದ ವೇಳೆ ಕಾನ್ಸ್ಟೇಬಲ್ ತಡೆದು ಏಕಮುಖ ಸಂಚಾರ ರಸ್ತೆ ಹೋಗುವ ಹಾಗೆ ಇಲ್ಲ ಮತ್ತು ನೀನು ಹೆಲ್ಮೆಟ್ ಧರಿಸಿಲ್ಲ ಅಪಘಾತವಾದರೆ ಕುಟುಂಬದವರು ನೋವು ಪಡುತ್ತಾರೆ ಎಂದು ಹೇಳಿದ್ದಕ್ಕೆ ಸಿಟ್ಟುಗೊಂಡ ಬೈಕ್ ಸವಾರನು ಕರ್ತವ್ಯ ನಿರತ ಪೊಲೀಸ್ ಕಾನ್ಸ್ಟೇಬಲ್ ಶರ್ಟ್ ಎಳೆದು ದೂಡಿ ಕೆಡವಿ ಕುತ್ತಿಗೆ ಹಿಡಿದು ಕೊಲೆ ಮಾಡಲು ಯತ್ನಿಸಿರುವ ಬಗ್ಗೆ ಠಾಣೆಯಲ್ಲಿ ದೂರು ದಾಖಲಾಗಿದೆ.