ಯಲ್ಲಾಪುರ: ಪಟ್ಟಣದ ಬಿಆರ್‌ಸಿ ಕಚೇರಿಯಲ್ಲಿ ಶನಿವಾರ ಇಡಗುಂದಿ,ನಂದೊಳ್ಳಿ,ಆನಗೋಡ,ಯಲ್ಲಾಪುರ ಒಂದು ಮತ್ತು ಎರಡು ಕ್ಲಸ್ಟರ್‌ಗಳ ಸಮಾಲೋಚನಾ ಸಭೆ ನಡೆಯಿತು.
ಬಿಇಒ ಎನ್.ಆರ್.ಹೆಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾರ್ಗದರ್ಶನ ಮಾಡಿದರು. ದೈಹಿಕ ಶಿಕ್ಷಣ ಪರಿವೀಕ್ಷಕ ಪ್ರಕಾಶ ತಾರಿಕೊಪ್ಪ, ಬಿಆರ್‌ಪಿ ಪ್ರಶಾಂತ ಪಟಗಾರ, ನೌಕರ ಸಂಘದ ತಾಲೂಕಾ ಅಧ್ಯಕ್ಷ ಸಂಜೀವಕುಮಾರ ಹೊಸ್ಕೇರಿ ಮುಂತಾದವರು ಭಾಗವಹಿಸಿದ್ದರು.