ಸಿದ್ದಾಪುರ: ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ಸುವರ್ಣ ಮಹೋತ್ಸವದಲ್ಲಿ ಸಿದ್ದಾಪುರ ಬಕ್ಕೆಮನೆ ಪಕ್ಕದ ಸೀತಾಳಭಾವಿ ಮೂಲದ ಮಹಾಬಲ ಸೀತಾಳಭಾವಿ ಅವರ 23ನೇ ಕೃತಿ ‘ಸಂಪೂರ್ಣ ಚಾಣಕ್ಯ ನೀತಿ ಮತ್ತು ಚಾಣಕ್ಯನ ಜೀವನ ಚರಿತ್ರೆ’ ಅರ್ಥಸಂಗ್ರಹ ಮತ್ತು ನೀತಿಸೂತ್ರಗಳ ಅನುವಾದ ಮತ್ತು ವ್ಯಾಖ್ಯಾನ ಬಿಡುಗಡೆಯಾಯಿತು. ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ಶೋಭಾ ಕರಂದ್ಲಾಜೆ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ಅಧ್ಯಕ್ಷ ಅಶೋಕ ಹಾರನಹಳ್ಳಿ ಲೋಕಾರ್ಪಣೆಗೊಳಿಸಿದರು. ಪುಸ್ತಕವನ್ನು ವಸಂತ ಪ್ರಕಾಶನ ಪ್ರಕಟಿಸಿದೆ.