Slide
Slide
Slide
previous arrow
next arrow

ಕ್ಯಾದಗಿ ವಿಎಸ್ಎಸ್ ಸಂಘಕ್ಕೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

300x250 AD

ಸಿದ್ದಾಪುರ: ತಾಲೂಕಿನ ಕ್ಯಾದಗಿ ವ್ಯವಸಾಯ ಸೇವಾ ಸಹಕಾರಿ ಸಂಘದ ಮುಂದಿನ ಐದು ವರ್ಷದ ಅವಧಿಗೆ ಅಧ್ಯಕ್ಷರಾಗಿ ಎಂ.ಜಿ.ನಾಯ್ಕ ಹಾದ್ರಿಮನೆ ಹಾಗೂ ಉಪಾಧ್ಯಕ್ಷರಾಗಿ ಭಾರತಿ ಸೀತಾರಾಮ ಭಟ್ಟ ಕಲ್ಲಾಳ ಶುಕ್ರವಾರ ಅವಿರೋಧವಾಗಿ ಆಯ್ಕೆ ಆಗಿದ್ದಾರೆ.

ಈ ಸಂದರ್ಭದಲ್ಲಿ ಆಡಳಿತ ಮಂಡಳಿಗೆ ಆಯ್ಕೆ ಆದ ಪಿ.ಬಿ. ನಾಯ್ಕ ಶಿರಗಳ್ಳೆ, ಗಣೇಶ ಭಟ್ಟ ಕೆರೆಹೊಂಡ, ರಾಘವೇಂದ್ರ ನಾಯ್ಕ ಹೆಗ್ಗೇರಿ, ಸುಬ್ರಾಯ ಹೆಗಡೆ ಮಕ್ಕಿಗದ್ದೆ, ಲಕ್ಷ್ಮಣ ನಾಯ್ಕ ಹೊನ್ನೇಬಿಡಾರ, ವಿಜಯಾ ರಮೇಶ ನಾಯ್ಕ ಹಳ್ಳಿಬೈಲು, ನಾರಾಯಣ ಚೌಡ ಹಸಲರ ಹಂದೀಮನೆ, ಕೆ.ಪಿ.ರಘುಪತಿ ಕ್ಯಾದಗಿ ಇವರು ಉಪಸ್ಥಿತರಿದ್ದರು. ರಿಟರ್ನಿಂಗ್ ಅಧಿಕಾರಿಯಾಗಿ ಯಲ್ಲಾಪುರದ ಸಹಕಾರ ಅಭಿವೃದ್ಧಿ ಅಧಿಕಾರಿ ಎ.ಕೆ.ಮಾಸ್ತಿ ಕರ್ತವ್ಯನಿರ್ವಹಿಸಿದರು. ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಂ.ಎನ್ ಗೌಡ ಹಾಗೂ ಸಿಬ್ಬಂದಿಗಳು ಸಹಕರಿಸಿದರು.

300x250 AD
Share This
300x250 AD
300x250 AD
300x250 AD
Back to top