ಹೊನ್ನಾವರ: ತಾಲೂಕಿನ ಅರಣ್ಯವಾಸಿ ಗ್ರೀನ್ ಕಾರ್ಡ್ ಪ್ರಮುಖರಿಗೆ ಕಾನೂನು ಮಾಹಿತಿ ಮತ್ತು ಕಾನೂನಾತ್ಮಕವಾಗಿ ಸಬಲೀಕರಣ ಮಾಡುವ ಉದ್ದೇಶದಿಂದ ಹೊನ್ನಾವರ ತಾಲೂಕಿನಲ್ಲಿ ಜ.೨೨ ಬುಧವಾರ ಮುಂಜಾನೆ ೧೦ ಗಂಟೆೆಗೆ ತರಬೇತಿ ಶಿಬಿರ ಸಂಘಟಿಸಲಾಗಿದೆ ಎಂದು ಜಿಲ್ಲಾ ಸಂಚಾಲಕ ರಾಮ ಮರಾಠಿ ಎಲ್ಕೋಟಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರಣ್ಯವಾಸಿಗಳ ಪುನರ್ ಪರಿಶೀಲನಾ ಪ್ರಕ್ರಿಯೆ ಮತ್ತು ಕಾಯಿದೆಯ ಮಾಹಿತಿಯನ್ನ ಜಿಲ್ಲಾಧ್ಯಕ್ಷ ರವೀಂದ್ರ ನಾಯ್ಕ ಮಾಹಿತಿ ನೀಡಲಿದ್ದಾರೆಂದು ಅವರು ತಿಳಿಸಿದ್ದಾರೆ.
ಶಿಬಿರಾರ್ತಿಗಳು ಕಡ್ಡಾಯವಾಗಿ ಗುರುತಿನ ಪತ್ರ ಧರಿಸಿಕೊಂಡು ಹಾಜರಿರುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.