ಸಿದ್ದಾಪುರ: ತಾಲೂಕಿನ ಕಾನಸೂರಿನ ಶ್ರೀಮತಿ ಇಂದಿರಾ ಗಾಂಧಿ ವಸತಿಶಾಲೆಯಲ್ಲಿ 2025-26ನೇ ಶೈಕ್ಷಣಿಕ ಸಾಲಿನ 6ನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಜ.25 ಕೊನೆಯ ದಿನಾಂಕವಾಗಿದ್ದು, SATS ಸಂಖ್ಯೆ, ವಿದ್ಯಾರ್ಥಿ ಸಹಿ, ಇತ್ತೀಚಿನ 4 ಭಾವಚಿತ್ರ, ಮೀಸಲಾತಿಗೆ ಸಂಬಂದಿಸಿದ ದಾಖಲಾತಿಗಳು, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಈ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ವಸತಿ ಶಾಲೆಯಲ್ಲಿ ಉಚಿತ ಪ್ರವೇಶ/ ದಾಖಲಾತಿ, ಉಚಿತ ಆಂಗ್ಲ ಮಾಧ್ಯಮ ಶಿಕ್ಷಣ (6 ರಿಂದ 10ನೇ ತರಗತಿಯವರೆಗೆ), ಉಚಿತ ಊಟ ಮತ್ತು ವಸತಿ ವ್ಯವಸ್ಥೆ, ಉಚಿತ ಸಮವಸ್ತ್ರ, ಶೂ, ಸಾಕ್ಸ್, ಬೆಲ್ಟ್, ಟೈ, ಉಚಿತ ಪಠ್ಯ ಪುಸ್ತಕ, ನೋಟಬುಕ್ ಹಾಗೂ ಲೇಖನ ಸಾಮಗ್ರಿಗಳು, ಉಚಿತ ಶುಚಿತ್ವ ಸಾಮಗ್ರಿಗಳು, ಉಚಿತ ಕರಾಟೆ, ಚಿತ್ರಕಲೆ ಹಾಗೂ ಸಂಗೀತ ತರಬೇತಿ ಮುಂತಾದ ಸೌಲಭ್ಯಗಳು ಲಭ್ಯವಿದೆ.
ಪರೀಕ್ಷೆಯು ಫೆ:15, ಶನಿವಾರ ಮಧ್ಯಾಹ್ನ 2.30 ರಿಂದ ಸಾಯಂಕಾಲ 4.30ರವರೆಗೆ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ Tel:+918762634861, Tel:+919483098942, Tel:+919481453735 ಸಂಪರ್ಕಿಸಲು ಕೋರಿದೆ.