ಕಾರವಾರ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಾಹನಗಳಲ್ಲಿ ಸಾರ್ವಜನಿಕ ಪ್ರಯಾಣಿಕರಿಗೆ ಚಿಲ್ಲರೆ ಸಮಸ್ಯೆಯನ್ನು ಬಗೆಹರಿಸಿ, ಸಾರಿಗೆ ವ್ಯವಸ್ಥೆಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಕಾರ್ಯಾಚರಣೆಯನ್ನು ಉತ್ತಮಪಡಿಸಲು ನಗದುರಹಿತ “UPI” ವಹಿವಾಟುಗಳ ಮೂಲಕ ಟಿಕೇಟ ವಿತರಣೆಯನ್ನು ದಿನಾಂಕ :01-09-2023 ರಿಂದ ಪ್ರಾರಂಭಿಸಿದ್ದು, ಪ್ರಸ್ತುತ ಸಂಸ್ಥೆಯ 50 ಘಟಕಗಳಲ್ಲಿ ನಿರ್ವಹಿಸಲಾಗುತ್ತಿದೆ. ಡಿಸೆಂಬರ್-2024 ರ ಅಂತ್ಯದವರೆಗೆ UPI ವಹಿವಾಟಿನಿಂದ ಒಟ್ಟು 79.66 ಲಕ್ಷ ವಹಿವಾಟುಗಳಿಂದ ರೂ. 76.38 ಕೋಟಿ ಸಂಗ್ರಹವಾಗಿದೆ.
ಪ್ರಸ್ತುತ ಸಂಸ್ಥೆಯ ವಿವಿಧ ವಿಭಾಗಗಳ ವಾಣಿಜ್ಯ ಆದಾಯದ ಹಣವನ್ನು UPI ಮೂಲಕ ಪಾವತಿಸಿಕೊಳ್ಳುವ ವ್ಯವಸ್ಥೆಯನ್ನು ಆಗಷ್ಟ್-2024 ರಿಂದ ಪ್ರಾರಂಭಿಸಲಾಗಿದ್ದು, ಡಿಸೆಂಬರ್-2024 ರ ಅಂತ್ಯದವರೆಗೆ UPI ವಹಿವಾಟಿನಿಂದ ಒಟ್ಟು 29422 ವಹಿವಾಟುಗಳಿಂದ ರೂ. 8.33 ಕೋಟಿ ವಾಣಿಜ್ಯ ಆದಾಯ ಸಂಗ್ರಹವಾಗಿರುತ್ತದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ.ಎಂ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.