ಅವುರ್ಲಿಯಲ್ಲಿ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಯಶಸ್ವಿಯಾಗಿ ಸಂಪನ್ನ
ಜೋಯಿಡಾ: ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ಅವುರ್ಲಿಯಲ್ಲಿ ನಡೆದ ಸಂಕ್ರಾಂತಿ ಹಬ್ಬದ ಅಂಗವಾಗಿ ಸತತ 15ನೇ ವರ್ಷದ ಶ್ರೀ ಸೋಮೇಶ್ವರ ಯುವ ಒಕ್ಕೂಟ ಹಾಗೂ ಸಮಸ್ತ ಊರ ನಾಗರೀಕರ ಸಂಯುಕ್ತ ಆಶ್ರಯದಲ್ಲಿ ಆಹ್ವಾನಿತ ತಂಡಗಳ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಯಶಸ್ವಿಯಾಗಿ ಸಂಪನ್ನಗೊಂಡಿತು.
ಸೋಮೇಶ್ವರ ಯುವ ಒಕ್ಕೂಟದ ಹಾಗೂ ಪಂದ್ಯಾವಳಿಯ ಪ್ರಥಮ ಬಹುಮಾನ ಪಡೆದ ಅವುರ್ಲಿ ಶ್ರೀ ಸೋಮೇಶ್ವರ ಕ್ರಿಕೆಟ್ ತಂಡದ ನಾಯಕರಾದ ಅನಿಲ ಶೇಟಕರ ಮಾತನಾಡಿ ನಮ್ಮ ತಂಡವು ಕಳೆದ ಹದಿನೈದು ವರ್ಷಗಳಿಂದ ತುಂಬಾ ಶ್ರಮಪಟ್ಟು, ಗುರು ಹಿರಿಯರ,ಊರ ಗ್ರಾಮಸ್ಥರ,ತಂಡದ ಎಲ್ಲಾ ಸದಸ್ಯರ ಸಹಕಾರದಲ್ಲಿ ಬಹುಮಾನವನ್ನು ಪಡೆದದ್ದು,ಬಹುಮಾನದ ನಗದು ಹಣವನ್ನು ಶ್ರೀ ಸೋಮೇಶ್ವರ ದೇವರ ದೇವಸ್ಥಾನದ ಜೀರ್ಣೋದ್ದಾರ ಸಹಾಯಾರ್ಥ ನೀಡುವುದಾಗಿ ಘೋಷಿಸಿ,ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಮೋಹನ ದೇಸಾಯಿಯವರಿಗೆ ಹಣವನ್ನು ಹಸ್ತಾಂತರಿಸಿದರು.
ಅವುರ್ಲಿ ಪರಿಸರ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ರಾಘವೇಂದ್ರ ನಾಯ್ಕ ಮಾತನಾಡಿ ಕಳೆದ ಮೂರು ದಿನಗಳಿಂದ ನಡೆದ ಕ್ರಿಕೆಟ್ ಪಂದ್ಯಾವಳಿಯು ಎಲ್ಲರ ಸಹಕಾರದಿಂದ ಯಶಸ್ವಿಯಾಗಿ ಮುಕ್ತಾಯಗೊಂಡ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಂದಿಗದ್ದೆ ಗ್ರಾಮ ಪಂಚಾಯತ ಸದಸ್ಯರಾದ ಧವಳೋ ಸಾವರ್ಕರ್ ಮಾತನಾಡಿ ನಮ್ಮ ಪಂಚಾಯತ ವ್ಯಾಪ್ತಿಯಲ್ಲಿಯೇ ಅತ್ಯುತ್ತಮವಾಗಿ ನಡೆಯುವ ಕ್ರಿಕೆಟ್ ಕ್ರೀಡಾಕೂಟದಲ್ಲಿ ಭಾಗವಹಿಸಿದ ಎಲ್ಲಾ ತಂಡಗಳು ಕ್ರೀಡಾ ಮನೋಭಾವನೆಯಿಂದ ಆಟವಾಡಿದ್ದಕ್ಕೆ,ಸತತ ಮೂರು ದಿನಗಳ ಕಾಲ ಆಟಗಾರರಿಗೆ,ಕ್ರೀಡಾಭಿಮಾನಿಗಳಿಗೆ ಊಟದ ವ್ಯವಸ್ಥೆ ಮಾಡಿದ ಸಂಘಟಕರ ಬಗ್ಗೆ, ಸಂಘಟಕರ ಸಂಘಟಿತ ಪ್ರಯತ್ನದಿಂದ ಕ್ರೀಡಾಕೂಟ ಯಶಸ್ವಿಯಾಗಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ,ಕ್ರೀಡೆಯಿಂದ ಸಮಾನತೆ, ಸಹೋದರತ್ವ, ಸೌಹಾರ್ದಯುತ ವಾತಾವರಣ ನಿರ್ಮಾಣ ಸಾಧ್ಯ,ಮುಂದಿನ ದಿನಗಳಲ್ಲಿಯೂ ನಮ್ಮ ಸಹಕಾರ ನಿರಂತರ ಇರಲಿದೆ ಎಂದು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ಸೋಮೇಶ್ವರ ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಮೋಹನ ದೇಸಾಯಿ ಮಾತನಾಡುತ್ತಾ ನಮ್ಮ ಅವುರ್ಲಿ ಕ್ರಿಕೆಟ್ ತಂಡವು ಸತತ 15 ವರ್ಷಗಳಿಂದ ಆಯೋಜಿಸುತ್ತಿರುವ ಕ್ರಿಕೆಟ್ ಪಂದ್ಯಾವಳಿಯಲ್ಲಿ ಈ ಬಾರಿ ಪ್ರಥಮ ಬಹುಮಾನ ಪಡೆದ ಬಗ್ಗೆ ಸಂತಸ ವ್ಯಕ್ತ ಪಡಿಸಿದರು.ಪ್ರಥಮ ಬಹುಮಾನದ ನಗದು ಹಣವನ್ನು ದೇವಸ್ಥಾನ ಜೀರ್ಣೋದ್ಧಾರದ ಸಹಾಯಾರ್ಥ ನೀಡಿದ ಬಗ್ಗೆ ಅಭಿನಂದನೆ ಸಲ್ಲಿಸಿದರು. ವೇದಿಕೆಯಲ್ಲಿ ದೀಪಕ ಬಾಂದೇಕರ,ಸಂಜಯ ದೇಸಾಯಿ, ಶೇಖರ ಪಾಡಕರ, ವಿನಾಯಕ, ರಾಮನಾಥ, ,ಶೋಭಾ, ಉಪಸ್ಥಿತರಿದ್ದರು. ಕ್ರಿಕೆಟ್ ಪಂದ್ಯಾವಳಿಯಲ್ಲಿ ಅವುರ್ಲಿ ಸೋಮೇಶ್ವರ ತಂಡವು ಪ್ರಥಮ ಬಹುಮಾನ ಗೆದ್ದರೆ, ಕೇಟಿಆರ್ ಜೋಯಿಡಾ ತಂಡವು ರನ್ನರ್ ಪ್ರಶಸ್ತಿ,ತೃತೀಯ ಸ್ಥಾನದ ಪ್ರಶಸ್ತಿಯನ್ನು ಸತಿ ದೇವಿ ಕುಂಬಾರವಾಡಾ ತಂಡವು ಪಡೆದುಕೊಂಡಿತು. ಸಂಘಟಕರಾದ ಅನಿಲ ಶೇಟಕರ ಸ್ವಾಗತಿಸಿದರೆ, ಆನಂದ ಶೇಟಕರ, ನಿರೂಪಿಸಿದರು. ಶೇಖರ ಪಾಡಕರ,ಸಂಜಯ ದೇಸಾಯಿ ದೇಸಾಯಿ,ದಿಲೀಪ ದೇವದಾಸ,ವಿಠ್ಠಲ, ನರೇಂದ್ರ, ಅಜಿತ, ಅಕ್ಷಯ,ಸಂತೋಷ ಇನ್ನಿತರರು ಸಹಕರಿಸಿದರು. ಕ್ರಿಕೆಟ್ ಪಂದ್ಯಾವಳಿಯ ಬಹುಮಾನ ವಿತರಣೆಯ ಸಂದರ್ಭದಲ್ಲಿ ಕೆಲವು ವೈಯುಕ್ತಿಕ ಬಹುಮಾನ ಗಳಾದ ಉತ್ತಮ ವಿಕೆಟ್ ಕೀಪಿಂಗ್ ರಾಘವೇಂದ್ರ ನಾಯ್ಕ, ಪಂದ್ಯ, ಸರಣಿ ಶ್ರೇಷ್ಠ,ಅತಿ ಹೆಚ್ಚು ಸಿಕ್ಸರ್, ಪಂಕಜ ಮರಾಠೆ,ಉತ್ತಮ ನಿರ್ಣಾಯಕರು ದೀಪಕ ಬಾಂದೇಕರ,ಉತ್ತಮ ನಾಯಕ ಅನಿಲ ಶೇಟಕರ,ಉತ್ತಮ ಸ್ಕೋರರ್ ಧವಳೋ ಗಣೇಶ ಸಾವರ್ಕರ್,ಶಿಸ್ತಿನ ತಂಡ ಹೀಗೆ ಇನ್ನಿತರ ಬಹುಮಾನಗಳನ್ನು ಪ್ರಾಯೋಜಕರು,ಗಣ್ಯರು ವಿತರಿಸಿದರು.