ಯಲ್ಲಾಪುರ: ಪಟ್ಟಣಕ್ಕೆ ಗುರುವಾರ ಆಗಮಿಸಿದ ಸಿದ್ಧಾರೂಢರ ಜ್ಯೋತಿ ಯಾತ್ರೆಗೆ ಭಕ್ತಿಪೂರ್ವಕವಾಗಿ ಸ್ವಾಗತಿಸಲಾಯಿತು. ವೀರಶೈವ ಲಿಂಗಾಯತ ಸಮುದಾಯದವರು ಭಜನಾ ಮೆರವಣಿಗೆ ಮೂಲಕ ಬಸವೇಶ್ವರ ದೇವಾಲಯಕ್ಕೆ ಕರೆತಂದು ಪೂಜೆ ಸಲ್ಲಿಸಿ ಮುಂದಿನಯಾತ್ರೆಗೆ ಯಲ್ಲಾಪುರದಿಂದ ಅಂಕೋಲಾ ಮಾರ್ಗವಾಗಿ ಗೋವಾಕ್ಕೆ ಬೀಳ್ಕೊಟ್ಟರು.
ಈ ಸಂದರ್ಭದಲ್ಲಿ ಸಿದ್ಧಾರೂಢ ಮಠದ ಉಪಾಧ್ಯಕ್ಷ ಮಂಜುನಾಥ ಮುನವಳ್ಳಿ, ಜ್ಯೋತಿಯಾತ್ರೆ ಅಧ್ಯಕ್ಷ ಉದಯಕುಮಾರ ನಾಯ್ಕ, ಈರಣ್ಣ ಪಾಳೇದ, ಬಸವೇಶ್ವರ ದೇವಾಲಯ ಸಮಿತಿಯ ಬಸವರಾಜ ಗೌಳಿ, ಉದಯ ಜಾಲಿಹಾಳ ,ವಿರುಪಾಕ್ಷ ಜೋಗಾರಶೆಟ್ಟರ,ಶಿವಯ್ಯ ಹಿರೇಮಠ,ವೀರುಪಾಕ್ಷ ಪಾಟೀಲ,ಜಗದೀಶ ಹಿರೇಮಠ, ವಿಜಯ ಹಿರೇಮಠ, ಜಯರಾಜ ಗೋವಿ,ಹಾಗೂ ಅಕ್ಕನ ಬಳಗದ ರತ್ನಾ, ಪುಷ್ಪಾ, ಶಶಿಕಲಾ, ಗೌರಿ, ರೇಣುಕಾ, ಅನುರಾಧಾ, ಪಾರ್ವತಿ, ಪ್ರಭಾವತಿ, ಇತರರು ಇದ್ದರು.