Slide
Slide
Slide
previous arrow
next arrow

ಸಂಸ್ಕಾರ ನೀಡುವ ಕಲೆಗಳ ಉಳಿಸುವ ಕಾರ್ಯ ಸೇವಾ ಸಂಸ್ಥೆಗಳಿಂದಾಗಲಿ: ಎಂ.ಎಲ್.ಭಟ್ ಉಂಚಳ್ಳಿ

300x250 AD

 ಸಿದ್ದಾಪುರ: ಯಕ್ಷಗಾನವೂ ಸೇರಿದಂತೆ ಸಂಸ್ಕಾರಗಳನ್ನು ನೀಡುವ ಎಲ್ಲಾ ಕಲೆಗಳನ್ನು ಉಳಿಸಿ ಬೆಳೆಸುವ ಕೆಲಸ ಕಾರ್ಯ ಸೇವಾ ಸಂಸ್ಥೆಗಳಿಂದ ಆಗಬೇಕಿದೆ ಎಂದು ಹೆಗ್ಗರಣೆ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಎಂ.ಎಲ್.ಭಟ್ ಉಂಚಳ್ಳಿ ಅಭಿಪ್ರಾಯ ಪಟ್ಟರು.

ಅವರು ವಸುಂಧರ ಸಮೂಹ ಸೇವಾ ಸಂಸ್ಥೆ ಶಿರಸಿ ಇವರಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರವಾರ ಇವರ ಪ್ರಾಯೋಜಕತ್ವದಲ್ಲಿ ಕಂಚಿಕೈ ಬಯಲು ರಂಗಮಂದಿರದಲ್ಲಿ ಆಯೋಜಿಸಲ್ಪಟ್ಟ ಗೌರವ ಸಮರ್ಪಣೆ ಮತ್ತು ಯಕ್ಷಗಾನ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡುತ್ತಾ ಕಲೆ ಮತ್ತು ಸಂಸ್ಕೃತಿ ಸಮಾಜದ  ಜೀವಾಳ ವಾಗಿದ್ದು ಸಾಧಕರನ್ನು ಗುರುತಿಸಿ ಗೌರವಿಸುವದು ಸಮಾಜದ ಪ್ರತಿಯೊಬ್ಬನ ಕರ್ತವ್ಯ ಎಂದರು. ಈ ದಿಸೆಯಲ್ಲಿ ವಸುಂಧರಾ ಸಂಸ್ಥೆ ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತಿದೆ ಎಂದರು.

      ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಸಾಮಾಜಿಕ  ಧುರೀಣ ಎಸ್.ಕೆ.ಭಾಗವತ್  ಶಿರಸಿಮಕ್ಕಿ  ಇವರು ಜಾನಪದ ಲೋಕ ಪುರಸ್ಕೃತ ಹಿರಿಯ ಯಕ್ಷಗಾನ ಕಲಾವಿದ ಜಿಎಂ ಭಟ್ ಕೆವಿ ಹೆಗ್ಗರಣೆ ಇವರನ್ನು ಸನ್ಮಾನಿಸಿ  ಅವರು ಸಮಾಜಕ್ಕೆ ನೀಡಿದ ಕೊಡುಗೆಯನ್ನು ಶ್ಲಾಘಿಸಿ ಅಭಿನಂದನಾ ನುಡಿಗಳನ್ನಾಡಿದರು ಸನ್ಮಾನ ಸ್ವೀಕರಿಸಿದ ಜಿ.ಎಂ. ಭಟ್ ಕೆ.ವಿ. ಯವರು ಕಲಾವಿದರು ಹೆಚ್ಚು ಅಧ್ಯಯನಶೀಲರಾಗಿ ಪಾತ್ರಗಳನ್ನು ಅಭಿವ್ಯಕ್ತ ಪಡಿಸಬೇಕೆಂದು ಆಶಿಸಿದರು.

              ಶ್ರೀಮತಿ ಪದ್ಮಾವತಿ ಎಂ ಗೌಡ ಬಿಳೇಕಲ್ ಮನೆ ಅಧ್ಯಕ್ಷರು ಗ್ರಾಮ ಪಂಚಾಯತ ತಂಡಾಗುಂಡಿ, ಶ್ರೀ ರಮೇಶ ಹೆಗಡೆ ಕಾರ್ಯನಿರ್ವಾಹಣಾಧಿಕಾರಿ ಸೇವಾ ಸಹಕಾರಿ ಸಂಘ ಕಂಚಿಕೈ , ಹಿರಿಯ ಕಲಾಪೋಷಕರಾದ ಪ್ರಭಾಕರ ಹೆಗಡೆ , ಮಹಾಗಣಪತಿ ಯಕ್ಷಗಾನ ಮಂಡಳಿ ಅಧ್ಯಕ್ಷರಾದ ಸತೀಶ್ ಹೆಗಡೆ ಕಂಚಿಕೈ ,  ಎಮ್  ಆರ್ ಹೆಗಡೆ ಕಾನಗೋಡು, ಪಂಚಾಯತ ಸದಸ್ಯರಾದ ರಾಘವೇಂದ್ರ ಹೆಗಡೆ ಇಟ್ಳೋಣಿ ಇವರೆಲ್ಲ ಉಪಸ್ಥಿತರಿದ್ದು ಶುಭ ಹಾರೈಸಿದರು.

300x250 AD

          ರಾಜಾರಾಮ್ ಹೆಗಡೆ ಬಿಳೆಕಲ್ ಅಧ್ಯಕ್ಷರು ಗ್ರಾಮ ಪಂಚಾಯತ  ನಿಲ್ಕುಂದ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ  ಶತಮಾನದ ಇತಿಹಾಸ ಉಳ್ಳ ಕಂಚಿಕೈ ಯಕ್ಷಗಾನದ ಕಾಶಿಯಾಗಿದ್ದು ಯುವಕರು ಇನ್ನೂ ಹೆಚ್ಚುತೊಡಗಿಸಿಕೊಳ್ಳುವಂತಾಗಲೆಂದರು. ಉಡುಪಿ ಜಿಲ್ಲೆಯಂತೆ ನಮ್ಮ ಜಿಲ್ಲೆಯ ಎಲ್ಲಾ ಪ್ರೌಢಶಾಲೆಗಳಲ್ಲೂ ಯಕ್ಷಗಾನ ತರಬೇತಿ ಶಿಬಿರ ನಡೆಯುವಂತಾಗಬೇಕಂದು ಆಶಿಸಿದರು.

        ಪ್ರಾರಂಭದಲ್ಲಿ  ಸಂಸ್ಥೆಯ ಮುಖ್ಯಸ್ಥ ರ್‌ಟಿ ಭಟ್ಟ ಕಬ್ಗಾಲ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಕಾರ್ಯಕ್ರಮದ ಸಂಯೋಜಕ ಕಲಾವಿದ ವಿಶ್ವೇಶ್ವರ ಭಟ್ಟ ತೊರಗೋಡ ವಂದನಾರ್ಪಣೆಯನ್ನು ಮಾಡಿದರು. ಕುಮಾರಿ ಪ್ರಿಯಾಂಕ ಹೆಗಡೆ ಕಾರ್ಯಕ್ರಮವನ್ನು ನಿರೂಪಿಸಿದಳು. ನಂತರ ಅತಿಥಿ ಕಲಾವಿದರ ಕೊಡುವಿಕೆಯಿಂದ “ಸುಧನ್ವ ಕಾಳಗ” ಯಕ್ಷಗಾನ ಅದ್ಭುತವಾಗಿ ಪ್ರದರ್ಶನಗೊಂಡು ಜನ ಮೆಚ್ಚುಗೆಯನ್ನು ಗಳಿಸಿತು. ಹಿಮ್ಮೇಳದಲ್ಲಿ ಭಾಗವತರಾಗಿ ಸರ್ವೇಶ್ವರ ಹೆಗಡೆ ಮೂರೂರು , ಎಂಪಿ ಹೆಗಡೆ ಉಳ್ಳಾಲಗದ್ದೆ, ಮದ್ದಲೆವಾದಕರಾಗಿ ಸುಬ್ರಹ್ಮಣ್ಯ ಭಟ್ ಬಾಡ , ಗಜಾನನ ಹೆಗಡೆ ಕಂಚಿಕೈ, ಚಂಡೇವಾಧಕರಾಗಿ ಗಜಾನನ ಹೆಗಡೆ ಸಾಂತೂರು, ಭಾಗವಹಿಸಿ ಉತ್ತಮ ಹಿಮ್ಮೇಳವನ್ನು ಒದಗಿಸಿ ಯಕ್ಷಗಾನಕ್ಕೆ ಮೆರಗನ್ನು ತಂದರು.        ಮುಮ್ಮೇಳದಲ್ಲಿ ಅರ್ಜುನನಾಗಿ ಸುಬ್ರಹ್ಮಣ್ಯ ಚಿಟ್ಟಾಣಿ , ಸುಧನ್ವನಾಗಿ ಚಂದ್ರಹಾಸ್ ಗೌಡ ಹೊಸ ಪಟ್ಟಣ , ಕೃಷ್ಣನಾಗಿ ಯಕ್ಷರಾಧಕ ರಘುಪತಿ ನಾಯ್ಕ ಹೆಗ್ಗಣಿ, ಪ್ರಭಾವತಿಯಾಗಿ ಸದಾನಂದ ಪಟಗಾರ ಕೋಳಿಗಾರ, ವೃಷಕೇತುವಾಗಿ ಮಾರ್ಷಲ್ ಮೂರೂರು , ಇವರೆಲ್ಲ ಭಾಗವಹಿಸಿ ಅದ್ಭುತವಾಗಿ ಅಭಿನಯಿಸುವುದರ ಮೂಲಕ ಪ್ರೇಕ್ಷಕರ ಮನಸೂರೆಗೊಂಡರು ಈ ಕಾರ್ಯಕ್ರಮ ನಡೆಯುವಲ್ಲಿ ಶ್ರೀಮತಿ ಮಂಗಲಾ ನಾಯ್ಕ ಸಹಾಯಕ ನಿರ್ದೇಶಕರು ಕನ್ನಡ ಸಂಸ್ಕೃತಿ ಇಲಾಖೆ ಕಾರವಾರ ಇವರು ನಿರ್ದೇಶನವನ್ನು ನೀಡಿದ್ದರು.

Share This
300x250 AD
300x250 AD
300x250 AD
Back to top