Slide
Slide
Slide
previous arrow
next arrow

ಕುಂಬಾರವಾಡದಲ್ಲಿ ಗಮನ ಸೆಳೆದ ಮಕ್ಕಳ ಗ್ರಾಮ ಸಭೆ

300x250 AD

ಜೋಯಿಡಾ : ತಾಲೂಕಿನ ಕುಂಬಾರವಾಡದ ಸರಕಾರಿ ಪ್ರೌಢಶಾಲೆಯಲ್ಲಿ ತಾಲೂಕು ಪಂಚಾಯತ್ ಜೋಯಿಡಾ ಹಾಗೂ ಗ್ರಾ. ಪಂ. ಕುಂಬಾರವಾಡ ಇವರ ಸಹಯೋಗದಲ್ಲಿ ಮಂಗಳವಾರ ನಡೆದ ಮಕ್ಕಳ ಗ್ರಾಮಸಭೆಯು ಅರ್ಥಪೂರ್ಣವಾಗಿ ಜರುಗಿ ಎಲ್ಲರ ಗಮನ ಸೆಳೆಯಿತು.

ವಿದ್ಯಾರ್ಥಿ ಪ್ರತಿನಿಧಿ ಸಂಕೇತ ಹಲಗೇಕರ ಅಧ್ಯಕ್ಷತೆಯಲ್ಲಿ ನಡೆದ ಮಕ್ಕಳ ಗ್ರಾಮ ಸಭೆಯಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರ, ಭೌದ್ಧಿಕ ಬೆಳವಣಿಗೆಗೆ ಆಟಪಾಠ, ಜೀತ ಪದ್ದತಿ ನಿರ್ಮೂಲನೆ, ಹೆಣ್ಣು ಮಕ್ಕಳ ಪೋಷಣೆ, ರಕ್ಷಣೆ, ಹಾಗೂ ಆರೋಗ್ಯ ಮತ್ತು ಗ್ರಾಮದ ಸಮಸ್ಯೆಗಳ ಪರಿಹಾರದ ಬಗ್ಗೆ ಮುಕ್ತ ಚರ್ಚೆ ನಡೆಯಿತು. ಗ್ರಾ. ಪಂ. ಆಡಳಿತ ವಿಧಾನ, ಗ್ರಾಮಗಳ ಸಮಸ್ಯೆ ಪರಿಹಾರಗಳ ಬಗ್ಗೆ ಮಾಹಿತಿ ನೀಡಲಾಯಿತು.

ಕುಂಬಾರವಾಡ ಗ್ರಾ.ಪಂ ಅದ್ಯಕ್ಷೆ ಚೆನ್ನಮ್ಮ ಡೊಂಬರ ಮತ್ತು ಉಪಾಧ್ಯಕ್ಷರಾದ ದತ್ತಾ ನಾಯ್ಕ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಹಾಗೂ ಗ್ರಾಮಗಳ ಅಭಿವೃದ್ಧಿಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಇದು ಅತ್ಯುತ್ತಮವಾದ ಕಾರ್ಯಕ್ರಮವಾಗಿದೆ ಎಂದರು.

300x250 AD

ನೋಡಲ್ ಅಧಿಕಾರಿ ಆನಂದ ಪಾಟೀಲ್ ಮಾತನಾಡಿ ಗ್ರಾ, ಪಂ. ಆಡಳಿತ ವ್ಯವಸ್ಥೆ, ಸಾರ್ವಜನಿಕರ ಹಾಗೂ ಜನಪ್ರತಿನಿದಿನಗಳ ಕರ್ತವ್ಯ, ಗ್ರಾಮದ ಸಮಸ್ಯೆ ಪರಿಹಾರ ಬಗ್ಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಕುಂಬಾರವಾಡ ಗ್ರಾ. ಪಂ ಪಿಡಿಓ ಬೇವಿನಕೊಪ್ಪ ಮಲ್ಲಸರ್ಜ, ಗ್ರಾಮ ಪಂಚಾಯಿತಿ ಸದಸ್ಯರು, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಪ್ರೇಮಾನಂದ ವೆಳೀಪ್, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು, ವಿದ್ಯಾರ್ಥಿಗಳ ಪಾಲಕರು, ಪ್ರೌಢಶಾಲೆ ಮತ್ತು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರು ಶಿಕ್ಷಕ ವೃಂದವರು, ಅಂಗನವಾಡಿ ಮತ್ತು ಆರೋಗ್ಯ ಇಲಾಖೆಯ ಕಾರ್ಯಕರ್ತೆಯರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.

Share This
300x250 AD
300x250 AD
300x250 AD
Back to top