ಶಿರಸಿ: ಸ್ಕೊಡ್‌ವೇಸ್ ಸಂಸ್ಥೆಯಿಂದ ಅಂತರಾಷ್ಟ್ರೀಯ ರೈತ ದಿನಾಚರಣೆಯನ್ನು ಇತ್ತೀಚೆಗೆ ಆಚರಿಸಲಾಯಿತು. ಸಂಸ್ಥೆಯ ಕೃಷಿ ವಿಭಾಗದ ಯೋಜನಾ ಅನುಷ್ಠಾನ ಕಚೇರಿಯಲ್ಲಿ ಸಾಯಿಲ್ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಮತ್ತು ಮಣ್ಣಿನ ತಜ್ಞ ಪಿ. ಶ್ರೀನಿವಾಸ್ ಮಾತನಾಡುತ್ತಾ, ರೈತನ ಜೀವನದ ಅವಿಭಾಜ್ಯ ಅಂಗ ಮಣ್ಣು ಮತ್ತು ಬೆಳೆ ಇವುಗಳಿಗೆ ಶಕ್ತಿ ತುಂಬುವ ಕೆಲಸ ನಿರಂತರವಾಗಿ ನಡೆಯಬೇಕು. ಸಂಸ್ಥೆ ನಿರಂತರವಾಗಿ ಹಲವಾರು ಕೃಷಿ ಕಾರ್ಯಕ್ರಮಗಳ ಅನುಷ್ಠಾನದ ಮೂಲಕ ರೈತರಿಗೆ ನೆರವು ನೀಡುವ ಕೆಲಸ ಮಾಡುತ್ತಿದೆ ಎಂದು ರೈತ ದಿನಾಚರಣೆಯ ಶುಭ ಕೋರಿದರು. ಈ ಸಂದರ್ಭದಲ್ಲಿ ಮಣ್ಣು ಮತ್ತು ಬೆಳೆಗಳ ಪ್ರೇರಣೆ ಬಗ್ಗೆ ತರಬೇತಿ ನೀಡುತ್ತಾ ಮಣ್ಣನ್ನು ಬಲಗೊಳಿಸುವ ಹಲವಾರು ವಿಧಾನಗಳ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ತಿಳಿಸಿಕೊಟ್ಟರು.
ಹಸಿರೆಲೆ,ಒಣ ಎಲೆ ಜೀವಾಮೃತ ಮಣ್ಣಿಗೆ ಹಾಕಿ ನೀರು ಹಾಕುವ ಮೂಲಕ ಜಾಗೃತಿ ಮೂಡಿಸಿ ಸ್ಕೊಡ್‌ವೆಸ್ ಸಂಸ್ಥೆಯ ಸಿಬ್ಬಂದಿಗಳ ಜೊತೆ ವಿವಿಧ ಚಟುವಟಿಕೆ ನಡೆಸುವ ಮೂಲಕ ರೈತ ದಿನಾಚರಣೆ ಆಚರಿಸಿದರು.
ಈ ಕಾರ್ಯಕ್ರಮದಲ್ಲಿ ಸ್ಕೊಡ್‌ವೆಸ್ ಸಂಸ್ಥೆಯ ಕಾರ್ಯಕ್ರಮ ಅಧಿಕಾರಿಗಳು,ಸಹ ಸಿಬ್ಬಂದಿಗಳು, ಸಾಯಿಲ್ ಫೌಂಡೇಶನ್ ಅಧಿಕಾರಿಗಳು ಉಪಸ್ಥಿತರಿದ್ದರು.