Slide
Slide
Slide
previous arrow
next arrow

ಜಿ.ಪಂ.ಯೋಜನಾಧಿಕಾರಿ ವಿನೋದ್ ಅಣ್ವೇಕರ್ ಸೇವಾ ನಿವೃತ್ತಿ: ಬೀಳ್ಕೊಡುಗೆ 

300x250 AD

ಹೊನ್ನಾವರ : ಜಿ.ಪಂ. ಮುಖ್ಯ ಯೋಜನಾ ಅಧಿಕಾರಿಯಾಗಿ ನಿವೃತ್ತಿ ಹೊಂದಿದ, ಸರಳ ಸ್ವಭಾವದ ವಿನೋದ್ ಅಣ್ವೇಕರ್‌ಗೆ ಹಿರಿಯ ಅಧಿಕಾರಿ ಎಂಬ ಅಹಂಭಾವ ಅವರಲ್ಲಿ ಇರಲಿಲ್ಲ ಎಂದು ಪಂಇಓ ಚೇತನಕುಮಾರ ಹೇಳಿದರು.

ಅವರು ತಾ. ಪಂ. ಸಭಾಭವನದಲ್ಲಿ ನಡೆದ ಜಿ. ಪಂ. ಯೋಜನಾಧಿಕಾರಿ ವಿನೋಧ ಅಣ್ವೇಕರ್ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ವಿನೋದ್ ಅಣ್ವೇಕರವರ ಮುಂದಿನ ಜೀವನ ಸುಖಕರ ವಾಗಿರಲಿ, ನಿವೃತ್ತಿ ನಂತರ ಮತ್ತೆ ಸಹಕಾರಿ ಸೇವೆ ಸಲ್ಲಿಸುವಂತಾಗಲಿ ಎಂದು ಶುಭ ಹಾರೈಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ವಿನೋದ್ ಅಣ್ವೇಕರ್ ನಾನು ಮಾಡಿದ ಒಳ್ಳೆ ಕೆಲಸವನ್ನು ಗುರುತಿಸಿದ್ದೀರಿ ಅಂದುಕೊಳ್ಳೋತ್ತೇನೆ. ಆಡಳಿತ ಅಧಿಕಾರಿ ಯಾಗಿ 3 ವರ್ಷದಿಂದ ಕೆಲಸ ಮಾಡಲು ಸಹಕಾರ ನೀಡಿದ ಎಲ್ಲಾ ಅಧಿಕಾರಿಗಳಿಗೆ ಸಿಬ್ಬಂದಿಗಳಿಗೆ ಮಾಧ್ಯಮ ದವರಿಗೆ ಚಿರಋಣಿ. ಪ್ರವಾಸ ಪೀಡಿತ ಜವಾಬ್ದಾರಿ ಕೊಟ್ಟಿದ್ದಾಗ, ಅಂತಹ ಕಷ್ಟ ಸಮಯದಲ್ಲಿ ಪಿ ಡಿ ಓ ಗಳು ಸಹಕಾರ ನೀಡಿದ್ದಾರೆ. ತಾಲೂಕಾ ಮಟ್ಟದ ಸ್ವ ಸಹಾಯ ಗುಂಪಿನವರು ಸಹಕಾರ ನೀಡಿದ್ದಾರೆ. ಕ್ರಿಯಾಯೋಜನೆ ಮಾಡುವಾಗ ಸೂಕ್ಷ್ಮವಾಗಿ ಮಾಡಬೇಕಾಗುತ್ತದೆ. ಅಧಿಕಾರಿಗಳ ಸಹಕಾರದಿಂದ ಉತ್ತಮ ಕ್ರಿಯಾಯೋಜನೆ ಮಾಡಲು ಸಾಧ್ಯವಾಯಿತು. ಕ್ರಿಯಾಯೋಜನೆಯನ್ನು ಸರಕಾರದ ಮಾರ್ಗಸೂಚಿಯಂತೆ ಮಾಡಬೇಕಾಗುತ್ತದೆ. ರಾಷ್ಟ್ರ ದ್ವಜ ಹಾರಿಸುವಂತ ಸುಯೋಗ ನನಗೆ ಒದಗಿಬಂತು. 35 ವರ್ಷದಲ್ಲಿ ಯಾವುದೇ ಒತ್ತಡಕ್ಕೆ ಒಳಗಾಗದೆ ಕೆಲಸ ಮಾಡಿದ್ದೇನೆ. ಇಂದಿನ ಸನ್ಮಾನ ನನಗೆ ಮಾತು ಬರುತ್ತಿಲ್ಲ. ಕೃಷಿ ಇಲಾಖೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವರಿಂದ ಸನ್ಮಾನ ಸ್ವೀಕಾರ ಮಾಡಿದ್ದು ತುಂಬಾ ಖುಷಿ ಆಗಿದೆ. ಸಹಕರಿಸಿದ ತಮಗೆಲ್ಲರಿಗೂ ಧನ್ಯವಾದಗಳು ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕ್ಷೇತ್ರ ಶಿಕ್ಷಣ ಅಧಿಕಾರಿ ಜಿ. ಎಸ್. ನಾಯ್ಕ, ಆರೋಗ್ಯ ಅಧಿಕಾರಿ ಉಷಾ ಹಾಸ್ಯಗಾರ, ಪಿ. ಡಿ. ಓ ಕಿರಣಕುಮಾರ ನಾಯ್ಕ, ಸರಕಾರಿ ನೌಕರರ ಸಂಘದ ಅಧ್ಯಕ್ಷ 

300x250 AD

ಅಣ್ಣಪ್ಪ ಮುಕ್ರಿ, ಕೃಷಿ ಅಧಿಕಾರಿ ಪಾಂಡಪ್ಪ ಲಂಬಾಣಿ, ಹೆಸ್ಕಾಂ ಅಧಿಕಾರಿ ಆರ್. ಎಂ. ಭಟ್ಟ, ಜಿ. ಎಲ್. ನಾಯ್ಕ ವಿನೋದ ಅಣ್ವೇಕರ್ ಕುರಿತು ಸೇವಾ ಅವಧಿಯ ಅನುಭವ ಹಂಚಿಕೊಂಡರು.

ಇದೆ ಸಂದರ್ಭದಲ್ಲಿ ಭಟ್ಕಳಕ್ಕೆ ವರ್ಗಾವಣೆಗೊಂಡಿರುವ ತಾ. ಪ. ಕಚೇರಿಯಲ್ಲಿ ನರೇಗಾ ವಿಭಾಗದಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದ ಪದ್ಮಯ್ಯ ದೇವಾಡಿಗ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

ತಾಲೂಕಾ ಪಂಚಾಯತ, ಸರಕಾರಿ ನೌಕರರ ಸಂಘ, ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳು ವಿನೋದ ಅಣ್ವೇಕರ್ ರವರನ್ನು ಸನ್ಮಾನಿಸಿ ಗೌರವಿಸಿದರು. ಯುವಜನ ಸೇವಾ ಅಧಿಕಾರಿ ಸುದೀಸ್ ನಾಯ್ಕ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.

Share This
300x250 AD
300x250 AD
300x250 AD
Back to top