ಶಿರಸಿ: ತಾಲೂಕಿನ ಬೊಮ್ನಳ್ಳಿಯ ಅಮಿತ್ ಹೆಗಡೆ ಮಾಸ್ಟರ್ಸ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ಸ್ನಲ್ಲಿ ಚಿನ್ನದ ಪದಕ ಪಡೆಯುವ ಮೂಲಕ ಸಾಧನೆ ಗೈದ್ದಿದ್ದಾರೆ.
ಆರ್ವಿ ಕಾಲೇಜ್ ಆಫ್ ಇಂಜಿನಿಯರಿಂಗ್ ಬೆಂಗಳೂರಿನಲ್ಲಿ ಎಂಸಿಎ ಪದವಿ ಪಡೆದು, ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಇವರು.ಬೊಮ್ನಳ್ಳಿಯ ದತ್ತಾತ್ರೇಯ ಹೆಗಡೆ ಹಾಗೂ ಮಾಲತಿ ಹೆಗಡೆ ದಂಪತಿಗಳ ಪುತ್ರರಾಗಿದ್ದಾರೆ.