ದಾಂಡೇಲಿ : ನಗರದ ವಿವಿಧೆಡೆಗಳಲ್ಲಿ ತಂಡವನ್ನು ರಚಿಸಿ ದಾಳಿಗಿಳಿದ ಪೊಲೀಸರು ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ 26 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದು ದಂಡ ಆಕರಣೆ ಮಾಡಿದ ಘಟನೆ ಗುರುವಾರ ನಡೆದಿದೆ.
ಪಿಎಸ್‌ಐ ಅಮೀನ್ ಅತ್ತಾರ್ ಅವರ ನೇತೃತ್ವದಲ್ಲಿ ನಗರದ ವಿವಿಧ ಪ್ರಮುಖ ರಸ್ತೆಗಳಲ್ಲಿ ಬೆಳಿಗ್ಗಿನಿಂದಲೇ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದರು. ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ 26 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದು 13 ಸಾವಿರ ರೂಪಾಯಿ ದಂಡವನ್ನು ಆಕರಣೆ ಮಾಡಲಾಯಿತು.
ನಂತರ ಠಾಣೆಯ ಆವರಣದಲ್ಲಿ ಪಿಎಸ್‌ಐ ಅಮೀನ್ ಅತ್ತಾರ್ ಅವರು ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಕರೆ ನೀಡಿ, ಸಂಚಾರಿ ನಿಯಮಗಳ ಬಗ್ಗೆ ಮಾಹಿತಿಯನ್ನು ನೀಡಿದರು.