Slide
Slide
Slide
previous arrow
next arrow

ದಶಲಕ್ಷ ಗಿಡ ನೆಡುವ ಅಭಿಯಾನಕ್ಕೆ ವೃಕ್ಷಮಾತೆ ತುಳಸಿ ಗೌಡ‌ ಪ್ರೇರಣೆ: ರವೀಂದ್ರ ನಾಯ್ಕ

300x250 AD

ಶಿರಸಿ: ಅರಣ್ಯವಾಸಿಗಳಿಂದ ಸಂಘಟಿಸಿದ ದಶಲಕ್ಷ ಗಿಡ ನೇಡುವ ಕಾರ್ಯಕ್ರಮಕ್ಕೆ ವೃಕ್ಷಮಾತೆ ತುಳಸಿ ಗೌಡ ಪ್ರೇರಣೆಯಾಗಿದ್ದರು. ಅವರ ಪರಿಸರ ಮತ್ತು ಅರಣ್ಯೀಕರಣ ಕಾರ್ಯದಲ್ಲಿನ ಶ್ರದ್ದೆ ಮತ್ತು ಆಸಕ್ತಿ ಇಂದಿನ ಪೀಳೀಗೆಗಳಿಗೆ ಆದರ್ಶಮಯವಾಗಿರುವದು ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

ಅವರು ಡಿ.18ರಂದು ಹೋರಾಟಗಾರರ ವೇದಿಕೆಯ ಕಾರ್ಯಾಲಯದಲ್ಲಿ ಪದ್ಮಶ್ರೀ ತುಳಸಿ ಗೌಡ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತಾಡುತ್ತಾ ಮೇಲಿನಂತೆ ಹೇಳಿದರು.
ಒಂದು ಗಿಡ ನೇಡುವದರಿಂದ, ಬಹುಮುಖವಾಗಿ ಪ್ರಯೋಜನ ಪಡೆಯಲು ಸಾಧ್ಯ. ನಾವು ನೆಟ್ಟಂತ ಗಿಡ ನಮಗೆ ನೇರಳಾಗಿ, ನಮಗೆ ಉಸಿರು ನೀಡುವುದು ವಿಶೇಷ. ಅವರ ಇಂದು ನಮನ್ನ ಅಗಲಿರುವದು ದುಃಖಕರ ಸಂಗತಿ. ಅವರು ಇಂದು ದೈಹಿಕವಾಗಿ ನಮ್ಮನ್ನ ಅಗಲಿದರೂ ಅವರು ನೀಡಿದ ಪರಿಸರ ಸಂದೇಶ ಅಜಮರವಾಗಿ ಇರುತ್ತದೆ. ಎಂದು ಅವರು ಹೇಳಿದರು.

300x250 AD

ಕಾರ್ಯಕ್ರಮದಲ್ಲಿ ಜಿಲ್ಲಾ ಸಂಚಾಲಕ ಇಬ್ರಾಹಿಂ ಗೌಡಳ್ಳಿ ಸ್ವಾಗತ ಮತ್ತು ಪಸ್ರಾವನೆ ಮಾತನಾಡಿದ್ದರು. ಹಿರಿಯರಾದ ಆರ್. ಎಚ್. ನಾಯ್ಕ ಜನಕಡಕಲ್, ನಾಗರಾಜ ದೇವಸ್ಥಳಿ, ಗಂಗೂಬಾಯಿ ರಜಪೂತ, ಮಾಬ್ಲೇಶ್ವರ ಹನಮಾಳಕರ್ ಉಳವಿ, ವಿಜಯ ದೇವದಾಸ ಕಾರವಾರ, ವಾಸು ಜಿ ನಾಯ್ಕ, ನಾಗೇಶ ಮಾದೇವ ನಾಯ್ಕ, ಮುಂತು ಫರ್ನಾಂಡಿಸ್, ಫಸ್ಕಲ್ ಫರ್ನಾಂಡಿಸ್, ದಿವಾಕರ ನಾಯ್ಕ, ತಿಮ್ಮ ಗೌಡ, ಹನುಮಂತ ಮಡಿವಾಳ ಮುಂತಾದ ಗ್ರೀನ್ ಕಾರ್ಡ ಪ್ರಮುಖರು ಭಾಗವಹಿಸಿದರು.

Share This
300x250 AD
300x250 AD
300x250 AD
Back to top