ಯಲ್ಲಾಪುರ: ಬ್ಲಾಕ್ ಕಾಂಗ್ರೆಸ್ ಸಮಿತಿಯ ಕಾರ್ಯಾಲಯದಲ್ಲಿ ಡಿ.17, ಮಂಗಳವಾರ, ಯಲ್ಲಾಪುರ ತಾಲೂಕಾ ಸಾಮಾಜಿಕ ಜಾಲತಾಣ ಸಭಾ ನಡೆಯಿತು.
ಸಭೆಯಲ್ಲಿ ಸೋಶಿಯಲ್ ಮೀಡಿಯಾದ ರಚನೆಯ ಬಗ್ಗೆ, ಅದರ ಈಗಿನ ಮಹತ್ವದ ಬಗ್ಗೆ ಹಾಗೂ ಇದನ್ನು ತುಂಬಾ ಎಚ್ಚರಿಕೆ ವಹಿಸಿ ಬಳಸಬೇಕಾಗಿ ತಿಳಿಸಿ ಹೇಳಲಾಯಿತು.ರಾಜ್ಯದಿಂದ ಬಂದ ನೀತಿ ನಿಯಮದ ಬಗ್ಗೆ ತಿಳಿಸಿ ಹೇಳಲಾಯಿತು. ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯರಾದ ವಿವೇಕ ಹೆಬ್ಬಾರ್,ಜಿಲ್ಲಾ ಸಮಿತಿಯ ಪದಾಧಿಕಾರಿಗಳು, ವಿ.ಎಸ್. ಭಟ್, ಡಾ. ರವಿ ಭಟ್, ಗ್ಯಾರೆಂಟಿ ಸಮಿತಿಯ ತಾಲೂಕಾಧ್ಯಕ್ಷರಾದ ಉಲ್ಲಾಸ ಶಾನಬಾಗ್, ಜಿಲ್ಲಾ ಸೇವಾದಳ ಅಧ್ಯಕ್ಷರಾದ ಪ್ರಶಾಂತ್ ಸಭಾಹಿತ್, ಜಿಲ್ಲಾ ಮಹಿಳಾ ಸಂಘಟಿನಾ ಕಾರ್ಯದರ್ಶಿಯಾದ ಶ್ರೀಮತಿ ಸರಸ್ವತಿ ಗುನಗಾ, ತಾಲೂಕ ಮಹಿಳಾ ಅಧ್ಯಕ್ಷರಾದ ಶ್ರೀಮತಿ ಪೂಜಾ ನೇತ್ರೆಕಾರ, ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷರಾದ ಎಂ. ಡಿ.ಮುಲ್ಲಾ, ಅಲ್ಪಸಂಖ್ಯಾತ ಅಧ್ಯಕ್ಷರಾದ ಫೈರೋಜ್ ಸೈಯದ್,ಯುತ್ ಕಾಂಗ್ರೆಸ್ ಅಭ್ಯರ್ಥಿಯಾದ ಗಣೇಶ್ ಹೆಗಡೆ,ಪ್ರಧಾನ ಕಾರ್ಯದರ್ಶಿಯಾದ ಅನಿಲ್ ಮರಾಠೆ, ಸಾಮಾಜಿಕ ಜಾಲತಾಣ ಸಮಿತಿಯ ಸದಸ್ಯರಾದ ಪಕೀರಪ್ಪ, ಮಣಿಕಂಠ ನಾಯ್ಕ್, ಮ್ಯಾನುವಲ್ ಫರ್ನಾಂಡಿಸ್, ಪ್ರೀತಿ ಚೌಹಾಣ್,ಚಂದ್ರಶೇಖರ್ ಬನ್ಸೋಡೆ, ಶಂಕರ್ ಹೆಗಡೆ,ಮನೋಜ್ ನಾಯ್ಕ್, ವಿನಾಯಕ್, ಬಸ್ತಾವ್ ಮುಂತಾದವರು ಉಪಸ್ಥಿತಿದ್ದರು.ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಅಧ್ಯಕ್ಷರಾದ ಪ್ರಸನ್ನ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಾಮಾಜಿಕ ಜಾಲತಾಣ ತಾಲೂಕ ಅಧ್ಯಕ್ಷರಾದ ಶ್ರೀಮತಿ ಮುಸರತ್ ಖಾನ್ ಸ್ವಾಗತಿಸಿದರು.