ಸಿದ್ದಾಪುರ : ತಾಲೂಕಿನ ದೊಡ್ಮನೆ ಸೇವಾ ಸಹಕಾರಿ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಗಡಿಹಿತ್ಲು ನೇತೃತ್ವದ ತಂಡಕ್ಕೆ ಬಹುಮತ ದೊರೆತಿದೆ. ಸಾಲಗಾರರ ಕ್ಷೇತ್ರದ 9 ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 9 ಸ್ಥಾನವೂ ಗಡಿಹಿತ್ಲು ತಂಡ ವಿಜಯ ಸಾಧಿಸಿದೆ.
ಸುಬ್ರಾಯ ನಾರಾಯಣ ಭಟ್ಟ ಗಡಿಹಿತ್ಲು 455 ಮತ, ವಿವೇಕ ಭಟ್ಟ 426, ಕನ್ನಾ ನಾಯ್ಕ ಹಸ್ವಿಗುಳಿ 349, ಆನಂದ ಗೌಡ 328, ಗೋಪಾಲ ಭಟ್ಟ 255, ಚೌಡ ಗೌಡ 351, ತಿಮ್ಮಾ ನಾಯ್ಕ 216, ಮಂಜುನಾಥ ಭಟ್ಟ 248, ಶಾಂತ ಕುಮಾರ ಭಟ್ಟ 313, ಶಿವಾನಂದ ಹೆಗಡೆ 331 ಮತಗಳನ್ನು ಪಡೆದು ಜಯ ಸಾಧಿಸಿದ್ದಾರೆ.
ಸಾಲಗಾರರಲ್ಲದ ಎರಡು ಕ್ಷೇತ್ರದಲ್ಲಿ ಎದುರುದಾರ ಪಕ್ಷದವರು ಗೆದ್ದುಕೊಂಡಿದ್ದಾರೆ. ಸಾಲಗಾರರ ಕ್ಷೇತ್ರದಲ್ಲಿ ಎರಡು ಸ್ಥಾನ ಅವಿರೋಧವಾಗಿತ್ತು. ಈ ಚುನಾವಣೆಯಲ್ಲಿ ಬಾರೀ ಪ್ರಮಾಣದಲ್ಲಿ ಮತದಾರರಿಗೆ ಆಮಿಷ ಒಡ್ಡಲಾಗಿದೆ ಎಂಬ ಮಾತೂಗಳೂ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.