ಶಿರಸಿ: ನಗರದ ತೇಲಂಗ (ಸಹ್ಯಾದ್ರಿ) ಪ್ರೌಢಶಾಲೆಯಲ್ಲಿ ೧೯೮೯ನೇ ಸಾಲಿನ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಹಾಗೂ ಗುರು ವಂದನಾ ಕಾರ್ಯಕ್ರಮ ಶನಿವಾರ ಅರ್ಥಪೂರ್ಣವಾಗಿ ನಡೆಯಿತು.
ಆ ಅವಧಿಯಲ್ಲಿ ಶಿಕ್ಷಕರಾಗಿದ್ದ ಎಸ್.ವಿ.ದೇವ, ಎಸ್.ಎಸ್.ಭಟ್ಟ, ಎಂ.ವಿ.ಹೆಗಡೆ, ಎನ್.ವಿ.ಹೆಗಡೆ, ಭಡ್ತಿ ಮೇಂಡ ಹಾಗೂ ಬೋಧಕೇತರ ಸಿಬ್ಬಂದಿಗಳಾದ ಹೆಬ್ಳೆ, ರೇವಣಕರ, ಅಂಕೋಲೆಕರ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಅನೇಕ ಹಳೆಯ ವಿದ್ಯಾರ್ಥಿಗಳು ದೂರದ ಊರಿನಿಂದ ಬಂದು ತಮ್ಮ ಗುರುಗಳನ್ನು ವಂದಿಸಿ ಸಂಭ್ರಮಿಸಿದರು. ಅನೇಕ ವಿದ್ಯಾರ್ಥಿಗಳು ತಮಗೆ ಶಿಕ್ಷಕರ ಮಾರ್ಗದರ್ಶನದಿಂದ ಆದ ಅನಕೂಲಗಳನ್ನು ವಿವರಿಸಿದರು.
ಶಿಕ್ಷಕರು ಮಾತನಾಡಿ, ಹಳೆಯ ಹಾಗೂ ಈಗಿನ ಶಿಕ್ಷಣ ಪದ್ಧತಿಯಲ್ಲಿರುವ ವ್ಯತ್ಯಾಸವನ್ನು ತಿಳಿಸಿ ಶುಭ ಹಾರೈಸಿದರು. ಮುಖ್ಯ ಶಿಕ್ಷಕಿ ಅಮೃತಾ ಬಿಳಗಿ ಅಧ್ಯಕ್ಷತೆ ವಹಿಸಿದ್ದರು. ಜಗದೀಶ ನಾಯ್ಕ ಪ್ರಾಸ್ತಾವಿಕ ಮಾತನಾಡಿ, ಎಂಇಎಸ್ ಅಧ್ಯಕ್ಷ ಜಿ.ಎಂ.ಹೆಗಡೆ ಮುಳಖಂಡ, ಗೌರವ ಪ್ರಧಾನ ಕಾರ್ಯದರ್ಶಿ ಎಸ್.ಪಿ.ಶೆಟ್ಟಿ ಹಾಗೂ ಉಪ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರುಗಳಿಗೆ ಅಭಿನಂದನೆ ಸಲ್ಲಿಸಿದರು.
ಈ ವೇಳೆ ಗಣೇಶ ದಾವಣಗೆರೆ, ಪ್ರಶಾಂತ ಶೇಟ್, ಎಂ.ಡಿ.ರವಿರಾಜ, ಶ್ರೀರಾಮ ಶಾನಭಾಗ, ಗೋಪಾಲ ಪಟಗಾರ, ರಾಜೀವ ನಾಯ್ಕ, ಮಂಜುನಾಥ ನಾಯ್ಕ, ಶಿವಾನಂದ ನಾಯ್ಕ, ಜಗದೀಶ ಗುಡಿಗಾರ, ಕೆ.ವಿ.ಚೈತ್ರಾ, ಭವಾನಿ ದೇವಾಡಿಗ, ಮಹಾಂತೇಶ ರಿತ್ತಿ, ಮಹಾಂತೇಶ ಹಾದಿಮನಿ, ಡಾ.ವಿನಾಯಕ ಹೆಗಡೆ, ಮಹೇಶ ಚಂದಾವರ, ಅವಿನಾಶ, ಎನ್.ಜಿ.ವಿನಯ, ವೆಂಕಟರಮಣ ಜೋಶಿ, ಉಪೇಂದ್ರ ಮೇಸ್ತ, ಬಾಲಕೃಷ್ಣ ಶೆಟ್ಟಿ, ಮಂಜುನಾಥ ಹೆಗಡೆ, ಶ್ರೀಪತಿ ಹೆಗಡೆ, ರಮೇಶ ಚಂದಾವರ, ದತ್ತಗುರು ಹೆಗಡೆ, ಬಾಲಚಂದ್ರ ಪಾಟೀಲ, ಚಂದ್ರಕಾಂತ ಹಾಗೂ ಎಲ್ಲ ಹಳೆ ವಿದ್ಯಾರ್ಥಿಗಳು ಕಾರ್ಯಕ್ರಮವನ್ನ ಅಚ್ಚುಕಟ್ಟಾಗಿ ನಿರ್ವಹಿಸಿದರು. ನಾಗರಾಜ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.