Slide
Slide
Slide
previous arrow
next arrow

ಅರಣ್ಯವಾಸಿ ಸಮಸ್ಯೆ ಸ್ಪಂದನಾ ಅಗತ್ಯ: ಜಿಲ್ಲಾಮಟ್ಟದ ಅರಣ್ಯಧಿಕಾರಿಗಳೊಂದಿಗೆ ಚರ್ಚೆಗೆ ನಿರ್ಧಾರ

300x250 AD

ಶಿರಸಿ: ಅರಣ್ಯವಾಸಿಗಳ ಮತ್ತು ಅರಣ್ಯ ಸಿಬ್ಬಂದಿಗಳೊಂದಿಗೆ ಜರುಗುತ್ತಿರುವ ಕಾನೂನು ಅಂಶಗಳ ಗೊಂದಲಕ್ಕೆ ಪರಿಹಾರ ಮತ್ತು ಇಲಾಖೆಯೊಂದಿಗೆ ಸಾಮರಸ್ಯ ವೃದ್ಧಿಸುವ ಉದ್ದೇಶದಿಂದ ಡಿ.೨೧ರಂದು ಹೊನ್ನಾವರದಲ್ಲಿ ಜಿಲ್ಲಾಮಟ್ಟದ ಅರಣ್ಯವಾಸಿಗಳೊಂದಿಗೆ ಹಿರಿಯ ಅರಣ್ಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಅರಣ್ಯವಾಸಿಗಳ ಸಮಸ್ಯೆಗಳ ಸ್ಪಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲು ಹೋರಾಟಗಾರರ ವೇದಿಕೆಯು ನಿರ್ಧರಿಸಿದೆ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದ್ದಾರೆ.

ಅವರು ಹೋರಾಟಗಾರರ ಕಾರ್ಯಾಲಯದಲ್ಲಿ ಸಮಸ್ಯೆಗಳ ಪರಿಹಾರಕ್ಕೆ ಸ್ಪಂದಿಸುವ ಕುರಿತು ಅರಣ್ಯ ಸಂರಕ್ಷಣಾಧಿಕಾರಿ ಶಿರಸಿ ವಸಂತ ರೆಡ್ಡಿ ಅವರಿಗೆ ಬರೆದ ಪತ್ರವನ್ನ ಬಿಡುಗಡೆಗೊಳಿಸುತ್ತಾ ವೇದಿಕೆಯ ನಿರ್ಧಾರವನ್ನು ಪ್ರಕಟಿಸಿದರು.

ಇತ್ತೀಚಿನ ದಿನಗಳಲ್ಲಿ ಅರಣ್ಯ ಸಿಬ್ಬಂದಿಗಳಿಂದ ಅರಣ್ಯವಾಸಿಗಳ ವಿರುದ್ದ ಕಾನೂನುಭಾಹಿರ ಕೃತ್ಯಗಳ ಜರುಗುತ್ತದೆ ಎಂಬ ಭಾವನೆ ವ್ಯಕ್ತವಾಗಿರುವ ಹಿನ್ನಲೆಯಲ್ಲಿ ಈ ಹಿಂದೆ ಇಂತಹ ಘಟನೆಗಳನ್ನು ಮೇಲಿನ ಅಧಿಕಾರಿಗಳ ಗಮನಕ್ಕೆ ತಂದಾಗ್ಯೂ ಸಮಸ್ಯೆಗಳು ಬಗೆಹರಿಯದೇ ಇರುವುದರಿಂದ ಮತ್ತು ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿರುವ ಅತಿಕ್ರಮಣದಾರರು ಅರ್ಜಿ ಸಲ್ಲಿಸಿರುವ ಅತಿಕ್ರಮಣ ಪ್ರದೇಶದಲ್ಲಿ ಅರಣ್ಯವಾಸಿ ಯಥಾಸ್ಥಿತಿ ಕಾಯ್ದುಕೋಳ್ಳಬೇಕೆಂಬ ಸ್ಪಷ್ಟೋಪ್ತಿ ಉಲ್ಲೇಖಿಸುವ ಅಂಶ ಅರಣ್ಯವಾಸಿಗಳಿಗೆ ಗೊಂದಲಕ್ಕೆ ಕಾರಣವಾಗಿದೆ. ಈ ಹಿನ್ನಲೆಯಲ್ಲಿ ಅರಣ್ಯವಾಸಿಗಳೊಂದಿಗೆ ಮುಕ್ತವಾಗಿ ಚರ್ಚಿಸುವುದು ಅವಶ್ಯವಿದೆ ಎಂದು ಅವರು ಹೇಳಿದರು.

300x250 AD

ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ಇಬ್ರಾಹಿಂ ಗೌಡಳ್ಳಿ, ಶ್ರೀಧರ ಗೊಂಡ, ಗಣಪತಿ ಕೋಣಾರ, ರಾಮ ಪೂಜಾರಿ ಉಪಸ್ಥಿತರಿದ್ದರು.

ಸ್ಪಷ್ಟೀಕರಣ ಅವಶ್ಯ:
ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ವಿಚಾರಣೆ ಹಂತದಲ್ಲಿ ಪದೇ ಪದೇ ಅರಣ್ಯವಾಸಿಗಳು ಮತ್ತು ಅರಣ್ಯ ಇಲಾಖೆಯೊಂದಿಗೆ ಸಂಘರ್ಷಕ್ಕೆ ಕಾರಣವಾಗುತ್ತಿರುವ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಯೊಂದಿಗೆ, ಕಾನೂನು ಸ್ಪಷ್ಟಿಕರಣ ಮತ್ತು ಇಲಾಖೆಯೊಂದಿಗೆ ಸಮನ್ವಯ ವೃದ್ಧಿಸುವ ಉದ್ದೇಶದಿಂದ ಕಾರ‍್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

Share This
300x250 AD
300x250 AD
300x250 AD
Back to top