ಶಿರಸಿ: ನಗರದ ಅಂಬಾಗಿರಿಯ ಕಾಳಿಕಾಭವಾನಿ ದೇವಳದ ಎರಡು ದಿನಗಳ ಪ್ರತಿಷ್ಟಾಪನಾ 34ನೇ ವಾರ್ಷಿಕೋತ್ಸವದ ಉತ್ಸವವು ಶುಕ್ರವಾರ ಸಂಭ್ರಮದಿಂದ ಪ್ರಾರಂಭಗೊಂಡಿತು.
ವೇ.ಮೂ.ಕಟ್ಟೆ ಶಂಕರ ಭಟ್ಟರ ನೇತೃತ್ವದಲ್ಲಿ ನಡೆದ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಆರಂಭಗೊಂಡಿತು. ಇದರೊಂದಿಗೆ ಅವರು ಸಿಂಹಧ್ವಜ ಆರೋಹಣ ಮಾಡಿ, ವಾರ್ಷಿಕೋತ್ಸವಕ್ಕೆ ಅಧಿಕೃತ ಚಾಲನೆಯನ್ನು ನೀಡಿದರು. ಈ ಸಂದರ್ಭದಲ್ಲಿ ದೇವಳ ನಿರ್ವಹಣಾ ಸಮಿತಿ ಅಧ್ಯಕ್ಷ ವಿ.ಎಮ್. ಹೆಗಡೆ ಆಲ್ಮನೆ ಇತರ ಪದಾಧಿಕಾರಿಗಳು ಹಾಗೂ ಭಕ್ತರು ಉಪಸ್ಥಿತರಿದ್ದರು.
ಮಾತೆಯರಿಂದ ಕುಂಕುಮಾರ್ಚನೆ, ಕಲಶಸ್ಥಾಪನೆ ಬಲಿ, ಅಷ್ಟಾವದಾನ ಸೇವೆ ಮುಂತಾದವುಗಳು ನಡೆದವು. ನಾಳೆ ಶನಿವಾರ ಶತಚಂಡಿ ಹವನ ನಡೆಯಲಿದೆ.