ಸಿದ್ದಾಪುರ: ತಾಲೂಕಿನ ಶ್ರೀಮನ್ನೆಲೆಮಾವಿನ ಮಠದಲ್ಲಿ ಡಿ:11, ಬುಧವಾರದಂದು ಗೀತಾಜಯಂತಿಯ ಕಾರ್ಯಕ್ರಮವು ಬಹಳ ವಿಜೃಂಭಣೆಯಿಂದ ನೆರವೇರಿತು. ಈ ಸಂದರ್ಭದಲ್ಲಿ ಶ್ರೀ ಶ್ರೀ ಮಾಧವಾನಂದ ಭಾರತೀ ಮಹಾಸ್ವಾಮಿಗಳು ಜ್ಯೋತಿ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸುವ ಮೂಲಕ ದಿವ್ಯ ಸಾನ್ನಿದ್ಯವನ್ನು ಅನುಗ್ರಹಿಸಿದ್ದರು.
ವೈದಿಕರು ಮತ್ತು ಸೀಮೆಯ ಎಲ್ಲಾ ಭಜನಾ ಮಂಡಳಿಗಳಿಂದ ಆಗಮಿಸಿದ್ದ ಅನೇಕ ಮಾತೆಯರು ಶ್ರೀ ಭಗವದ್ಗೀತೆಯ 18 ಅಧ್ಯಾಯಗಳನ್ನು ಪಠಣ ಮಾಡುವುದರ ಮೂಲಕ ಭಗವಂತನ ನಾಮ ಸಂಕೀರ್ತನೆಯನ್ನು ಮಾಡಿದರು. ತದನಂತರ ವಿದ್ವಾನ್ ಅನಂತಮೂರ್ತಿ ಭಟ್ ಯಲೂಗಾರು ಇವರಿಂದ ಶ್ರೀ ಭಗವದ್ಗೀತೆಯ ಕುರಿತಾಗಿ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಈ ಸಮಯದಲ್ಲಿ ಮಾತನಾಡಿದ ಅವರು ನಿರಂತರ ಗೀತಾಧ್ಯಯನವನ್ನು ಮಾಡುತ್ತ ಬಂದರೆ ನಮಗೆ ಮಾನಸಿಕ ನೆಮ್ಮದಿ ಸಂತೋಷ, ದೊರಕುವುದರ ಜೊತೆಯಲ್ಲಿ ಜೀವನದಲ್ಲಿ ಬರುವ ಅನೇಕ ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂದು ಹೇಳುವುದರಮೂಲಕ ಶ್ರೀ ಭಗವದ್ಗೀತೆಯ ಮಹತ್ವವನ್ನು ಮತ್ತೂ ಅದರಿಂದಾಗುವ ಪ್ರಯೋಜನ ವನ್ನು ಹೇಳುತ್ತಾ ಗೀತೆಯ ಪ್ರತಿಯೊಂದು ಅಧ್ಯಾಯದ ಸಾರವನ್ನು ತಿಳಿಸಿಕೊಟ್ಟರು ನಂತರ ಗೀತಾ ಪರಮಾತ್ಮನಿಗೆ ಆರತಿಯನ್ನು ಮಾಡಿ ಮಂಗಲವನ್ನು ಮಾಡಲಾಯಿತು ಕೊನೆಯಲ್ಲಿ ಶ್ರೀ ಶ್ರೀ ಮಾಧವನಂದ ಭಾರತೀ ಮಹಾಸ್ವಾಮಿಗಳು ಎಲ್ಲರಿಗೂ ಆಶೀರ್ವಾದ ಮಂತ್ರಾಕ್ಷತೆಯನ್ನಿತ್ತು ಹರಸಿದರು. ವಿನಾಯಕ ಭಟ್ ನೆಲೆಮಾವು ಇವರು ಕಾರ್ಯಕ್ರಮವನ್ನು ನಿರ್ವಹಿಸಿದರು, ಗಣಪತಿ ಜಿ. ಭಾಗ್ವತ್ ತ್ಯಾರ್ಗಲ್. ವಂದನಾರ್ಪಣೆ ಮಾಡಿದರು ಮತ್ತು ಗಿರೀಶ್ ಭಟ್ ಹೊಸ್ತೋಟ ಇವರು ಸಕರಿಸಿದರು.