Slide
Slide
Slide
previous arrow
next arrow

ವಿಶ್ವ ಶೌಚಾಲಯ ದಿನಾಚರಣೆ; ಉತ್ತಮ ಶೌಚಾಲಯ ನಿರ್ವಹಣೆ ಪ್ರಶಸ್ತಿ ಪ್ರದಾನ

300x250 AD

ಕುಮಟಾ: ವಿಶ್ವ ಶೌಚಾಲಯ ದಿನಾಚರಣೆ ಪ್ರಯಕ್ತ “ನಮ್ಮ ಶೌಚಾಲಯ ನಮ್ಮ ಗೌರವ” ಎಂಬ ವಿಶೇಷ ಆಂದೋಲನದಲ್ಲಿ ಉತ್ತಮ ಕಾರ್ಯನಿರ್ವಹಣೆ ತೋರಿರುವ ಸಮುದಾಯ ಶೌಚಾಲಯ, ವೈಯಕ್ತಿಕ ಗೃಹ ಶೌಚಾಲಯ ಹಾಗೂ ಸ್ವಚ್ಛತಾಗಾರರಿಗೆ ಪ್ರಶಸ್ತಿಯನ್ನು ಸೋಮವಾರ ಕುಮಟಾ ತಾಲ್ಲೂಕು ಪಂಚಾಯತ ಸಭಾಭವನದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ಕಾಂದೂ ವಿತರಿಸಿದರು.

ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಅಧ್ಯಕ್ಷತೆಯಲ್ಲಿ ನವೆಂಬರ್ 19 ರಿಂದ ಡಿಸೆಂಬರ್ 10 ರವರೆಗೆ “ನಮ್ಮ ಶೌಚಾಲಯ ನಮ್ಮ ಗೌರವ” ಎಂಬ ಶೀರ್ಷಿಕೆ ಹಾಗೂ “ಅಂದದ ಶೌಚಾಲಯ ಆನಂದದ ಜೀವನ” ಎಂಬ ಘೋಷ ವಾಕ್ಯದೊಂದಿಗೆ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಸಮುದಾಯ ಶೌಚಾಲಯ ನಿರ್ಮಾಣಗೊಂಡು MIS ನಲ್ಲಿ ದಾಖಲಿಸಿರುವ ಹಾಗೂ ಉತ್ತಮವಾಗಿ ಕಾರ್ಯಾಚರಣೆಯಲ್ಲಿರುವ ಶಿರಸಿ ತಾಲೂಕಿನ ಸೊಂದಾ ಗ್ರಾಮ ಪಂಚಾಯತ್‌ಯ ಜೈನ ಮಠ, ಯಲ್ಲಾಪುರ ತಾಲೂಕಿನ ಆನಗೋಡ ಗ್ರಾಮ ಪಂಚಾಯತಿಯ ಗೋಪಾಲಕೃಷ್ಣ ದೇವಸ್ಥಾನ, ಕುಮಟಾ ತಾಲೂಕಿನ ಗೋಕರ್ಣ ಗ್ರಾಮ ಪಂಚಾಯತಿಯ ಮುಖ್ಯ ಕಡಲತೀರ ಈ ಎಲ್ಲಾ ಉತ್ತಮ ಕಾರ್ಯಾಚರಣೆ ಮಾಡುತ್ತಿರುವ ಸಮುದಾಯ ಶೌಚಾಲಯಗಳಿಗೆ ಪ್ರಶಸ್ತಿ ನೀಡಲಾಯಿತು,

ಅದೇ ರೀತಿ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ವೈಯಕ್ತಿಕ ಗೃಹ ಶೌಚಾಲಯ ನಿರ್ಮಾಣಗೊಂಡ MIS ನಲ್ಲಿ ದಾಖಲಿಸಿರುವ ಹಾಗೂ ಉತ್ತಮವಾಗಿ ಕಾರ್ಯಾಚರಣೆಯಲ್ಲಿರುವ ಜಿಲ್ಲೆಯ ಅಂಕೋಲಾ ತಾಲೂಕಿನ ಅವರ್ಸ ಗ್ರಾಮ ಪಂಚಾಯತಿಯ ನಯನಾ ಸುಭಾಸ್ ನಾಯ್ಕ, ಕುಮಟಾ ತಾಲೂಕಿನ ಕಾಗಾಲ ಗ್ರಾಮ ಪಂಚಾಯತಿಯ ಅಘನಾಶಿನಿ ಗ್ರಾಮದ ಗೌರಿ ನಾರಾಯಣ ಪಟಗಾರ, ಭಟ್ಕಳ್ ತಾಲೂಕಿನ ಕಾಯ್ಕಿಣಿ ಗ್ರಾಮ ಪಂಚಾಯತಿಯ ಕಾಯ್ಕಿಣಿ ಗ್ರಾಮ ಭೈರಾ ಸೋಮಯ್ಯಾ ನಾಯ್ಕ, ಶಿರಸಿ ತಾಲೂಕಿನ ದೊಡ್ನಳ್ಳಿ ಗ್ರಾಮ ಪಂಚಾಯತ್ ಯ ದೊಡ್ನಳ್ಳಿ ಗ್ರಾಮದ ಕುಮುದಾ ಸತ್ಯನಾರಾಯಣ ಹೆಗಡೆ, ಯಲ್ಲಾಪುರ ತಾಲೂಕಿನ ಮಂಚಿಕೇರಿ ಗ್ರಾಮ ಪಂಚಾಯತ್ ಕಂಪ್ಲಿ ಗ್ರಾಮದ ಶಾಂತಾ ಹನುಮಂತ ಭೋವಿ ವಡ್ಡರ ಈ ಎಲ್ಲಾ ವೈಯಕ್ತಿಕ ಫಲಾನುಭವಿಗಳಿಗೆ ಪ್ರಶಸ್ತಿ ನೀಡಲಾಯಿತು.

300x250 AD

ನೈರ್ಮಲ್ಯ ಕ್ಷೇತ್ರದಲ್ಲಿ ಕಸ ಸಂಗ್ರಹಣೆ, ವಿಂಗಡಣೆ ಹಾಗೂ ವಾಹನ ಚಾಲನೆ ಕಾರ್ಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಕುಮಟಾ ತಾಲೂಕಿನ ದಿವಗಿ ಗ್ರಾಮ ಪಂಚಾಯತ್ ಶ್ಯಾಮಲಾ ಅಂಬಿಗ (ಸ್ವಚ್ಛ ವಾಹಿನಿ ಚಾಲಕಿ), ಯಲ್ಲಾಪುರ ತಾಲೂಕಿನ ಉಮ್ಮಚಗಿ ಗ್ರಾಮ ಪಂಚಾಯತಿಯ ಮಣಿಕಂಠವ್ವ ಲಿಂಗಪ್ಪ ವಡ್ಡರ (ಸ್ವಚ್ಛ ವಾಹಿನಿ ಚಾಲಕಿ), ಅಂಕೋಲಾ ತಾಲೂಕಿನ ಬೆಳಸೆ ಗ್ರಾಮ ಪಂಚಾಯತಿಯ ಅಮಿತಾ ಹೇಮಂತ ಆಗೇರ(ಕಸ ವಿಂಗಡಣೆಯಲ್ಲಿ ಕಾರ್ಯನಿರ್ವಹಣೆ),ಸ್ವಚ್ಛತಾಗಾರರನ್ನು ಗುರುತಿಸಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ (ಆಡಳಿತ)ನಾಗೇಶ್ ರಾಯ್ಕರ್, ಅಭಿವೃದ್ಧಿ ಶಾಖೆಯ ಉಪ ಕಾರ್ಯದರ್ಶಿ ಪ್ರಕಾಶ ಹಾಲಮ್ಮನವರ, ಮುಖ್ಯ ಲೆಕ್ಕಾಧಿಕಾರಿ ಆನಂದಸಾ ಹಬೀಬ, ಮುಖ್ಯ ಯೋಜನಾಧಿಕಾರಿ ವಿನೋದ ಅಣ್ವೇಕರ, ಯೋಜನಾ ನಿರ್ದೇಶಕ ಕರೀಂ ಅಸಾದಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರÀ ರಾಜೀವ ನಾಯ್ಕ, ಆಡಳಿತ ವಿಭಾಗದ ಸಹಾಯಕ ಕಾರ್ಯದರ್ಶಿ ಸುನೀಲ್ ನಾಯ್ಕ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಎಲ್ಲ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು ಮತ್ತು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top