Slide
Slide
Slide
previous arrow
next arrow

ಡಿ.14ಕ್ಕೆ ನಿತ್ಯಾನಂದ ಮಂದಿರದಲ್ಲಿ ಸತ್ಯನಾರಾಯಣ ವ್ರತ

300x250 AD

ಶಿರಸಿ: ಇಲ್ಲಿನ ಮರಾಠಿಕೊಪ್ಪದ ಶ್ರೀ ಸದ್ಗುರು ನಿತ್ಯಾನಂದ ಸೇವಾ ಸಮಿತಿಯಿಂದ ಶ್ರೀ ಸದ್ಗುರು ನಿತ್ಯಾನಂದ ಮಂದಿರದಲ್ಲಿ ಡಿ.14, ಶನಿವಾರ ಬೆಳಿಗ್ಗೆ 10ಗಂಟೆಯಿಂದ 108 ಕಲಶದೊಂದಿಗೆ ಶ್ರೀ ಸತ್ಯನಾರಾಯಣ ವ್ರತವನ್ನು ಆಯೋಜಿಸಲಾಗಿದೆ.

ಮಧ್ಯಾಹ್ನ 12:30 ಗಂಟೆಗೆ ಮಹಾಪೂಜೆ ನಂತರ ತೀರ್ಥ ಪ್ರಸಾದ ವಿತರಣೆ, ಮಧ್ಯಾಹ್ನ 1:00 ಗಂಟೆಗೆ “ಮಹಾಪ್ರಸಾದ ಅನ್ನಸಂತರ್ಪಣೆ ನಡೆಯುವುದು. ಸದ್ಭಕ್ತರು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ ತನು-ಮನ-ಧನ ಸಹಾಯ ಸಹಕಾರ ನೀಡಿ ಕಾರ್ಯಕ್ರಮದ ಯಶಸ್ವಿಗೆ ತಮ್ಮನ್ನು ತಾವು ಸಮರ್ಪಿಸಿಕೊಂಡು ಸೇವೆ ಸಲ್ಲಿಸಿ ಶ್ರೀ ಸತ್ಯನಾರಾಯಣ ಹಾಗೂ ಸದ್ಗುರುಗಳ ಕೃಪೆಗೆ ಪಾತ್ರರಾಗಬೇಕೆಂದು ವಿನಂತಿಸಲಾಗಿದೆ.

300x250 AD
Share This
300x250 AD
300x250 AD
300x250 AD
Back to top