Slide
Slide
Slide
previous arrow
next arrow

ತಬಲಾ ವಾದನ: ರಾಜ್ಯಕ್ಕೆ ಸಮರ್ಥ ತೃತೀಯ

300x250 AD

ಹೊನ್ನಾವರ : ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಬೆಂಗಳೂರು ಇವರು ನಡೆಸಿದ ಸೃಜನಾತ್ಮಕ ಕಲಾ ಪ್ರದರ್ಶನದಲ್ಲಿ ತಬಲಾ ವಾದನದಲ್ಲಿ ಸಮರ್ಥ ಹೆಗಡೆ ರಾಜ್ಯಕ್ಕೆ ತೃತೀಯ ಸ್ಥಾನ ಪಡೆದಿದ್ದಾನೆ.

ತಾಲೂಕಿನ ಕಪ್ಪೆಕೆರೆಯ ಎನ್.ಜಿ.ಹೆಗಡೆ ಮತ್ತು ಶ್ರೀಮತಿ ವಿದ್ಯಾ ದಂಪತಿಗಳ ಮಗನಾಗಿದ್ದು, ಈತ ಶ್ರೀ ಭಾರತಿ ಆಂಗ್ಲ ಮಾಧ್ಯಮ ಶಾಲೆ ಕವಲಕ್ಕಿಯಲ್ಲಿ ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಜೊತೆಯಲ್ಲಿ ರಾಗಶ್ರೀ ಸಂಗೀತ ವಿದ್ಯಾಲಯ ಹಡಿನಬಾಳದಲ್ಲಿ ತಬಲಾ ಅಭ್ಯಾಸ ಮಾಡುತ್ತಿದ್ದು, ಈ ವಿದ್ಯಾಲಯದ ಸಾಧನೆಗಳಲ್ಲಿ ಇದು ಇನ್ನೊಂದು ಮೈಲಿಗಲ್ಲಾಗಿದೆ. ಇವನ ಸಾಧನೆಗೆ ಕವಲಕ್ಕಿ ಶಾಲೆಯ ಮುಖ್ಯ ಶಿಕ್ಷಕರು ಮತ್ತು ಶಿಕ್ಷಕ ವೃಂದ ಹಾಗೂ ಆಡಳಿತ ಮಂಡಳಿಯ ಅಧ್ಯಕ್ಷರು, ಸದಸ್ಯರು ಮತ್ತು ರಾಗಶ್ರೀ ಸಂಗೀತ ವಿದ್ಯಾಲಯ ಹಡಿನಬಾಳ ಇದರ ಪ್ರಾಚಾರ್ಯರು ಹಾಗೂ ಆಡಳಿತ ಮಂಡಳಿಯವರು ಮತ್ತು ಉಸ್ತಾದ್ ನಿಸಾರ್ ಅಹ್ಮದ್ ಧಾರವಾಡ, ಪ್ರೊಪೆಸರ್ ಶಂಬು ಭಟ್ ಕಡತೋಕ, ವಿದ್ವಾನ್ ಶಿವಾನಂದ ಭಟ್, ಶೇಷಾದ್ರಿ ಅಯಂಗಾರ್, ಡಾ.ಕೆ ಎಸ್ ಭಟ್ ಭದ್ರಾವತಿ, ಅರುಣ ಹೆಗಡೆ ಕುಮಟಾ,ಶ್ರೀಮತಿ ಲಲಿತಾ ಎನ್ ಎಸ್ ಹೆಗಡೆ ಹಿರೇಮಕ್ಕಿ, ಸುಬ್ರಾಯ ಭಾಗ್ವತ, ಶ್ರೀಮತಿ ಲಕ್ಷ್ಮಿ ಹೆಗಡೆ ಬಗ್ಗೋಣ, ತಿಮ್ಮಣ್ಣ ಹೆಗಡೆ ಗುಡ್ಡೆಬಾಳ , ಪ್ರೊ.ಕೆ.ವಿ. ಹೆಗಡೆ, ನಿವೃತ್ತ ಪ್ರಾಂಶುಪಾಲ ಎಸ್.ಜಿ.ಭಟ್, ಎ.ಕೆ. ಗುರುದತ್ತ ಕೋಲ್ಕತ್ತಾ ಗಣಪತಿ ಹೆಗಡೆ ಯಲ್ಲಾಪುರ, ಯೋಗಾನಂದ ಭಟ್ಟ, ವಿನಾಯಕ ಭಟ್ಟ ಮತ್ತು ರಾಜ್ಯ ಯುವಪ್ರಶಸ್ತಿ ವಿಜೇತ ಶಿಕ್ಷಕ ಸಣ್ಣಪ್ಪ ಭಾಗ್ವತ ಯಲ್ಲಾಪುರ, ವಿದ್ವಾನ್ ದತ್ತಾತ್ರಯ ಚಿಟ್ಟೆಪಾಲ್ ಇವರೆಲ್ಲ ಇವನ ಸಾಧನೆಗೆ ಶುಭ ಹಾರೈಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top