Slide
Slide
Slide
previous arrow
next arrow

ಅರಣ್ಯ ಸಿಬ್ಬಂದಿಯ ಕರ್ತವ್ಯಲೋಪ: ಸತ್ಯ ಶೋಧನಾ ಸಮಿತಿಯಿಂದ ದೃಢ

300x250 AD

ಹೊನ್ನಾವರ: ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ತಾಲೂಕಿನ ಚಿಕ್ಕನಗೋಡ ಗ್ರಾಮ ಪಂಚಾಯತಿ ವ್ಯಾಪ್ತಿಯ ರಾಜು ತಿಪ್ಪಯ್ಯ ನಾಯ್ಕ ಅವರ ಅರಣ್ಯ ಭೂಮಿ ಸಾಗುವಳಿ ಕ್ಷೇತ್ರ ಅರಣ್ಯವಾಸಿಗೆ ಅವಾಚ್ಯ ಶಬ್ದದಿಂದ ನಿಂದಿಸಿ, ಸಾಗುವಳಿ ಕ್ಷೇತ್ರದ ಬೇಲಿ ಮತ್ತು ಗಿರಮಡಗಳನ್ನ ನಾಶ ಪಡಿಸಿ ಕಾನೂನು ಮೀರಿ ಶುಕ್ರವಾರದಂದು ದೌರ್ಜನ್ಯ ಎಸಗಿರುವ ಕ್ಷೇತ್ರಕ್ಕೆ ಭೇಟಿ ನೀಡಿದ ಅರಣ್ಯ ಭೂಮಿ ಹೋರಾಟಗಾರರ ಸತ್ಯ ಶೋಧನಾ ಸಮಿತಿಯಿಂದ ಧೃಡಪಟ್ಟಿದ್ದು, ಅರಣ್ಯ ಸಿಬ್ಬಂದಿಗಳ ಅಪಕೃತ್ಯವನ್ನು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಬಲವಾಗಿ ಖಂಡಿಸಿದ್ದಾರೆ.

ಸತ್ಯ ಶೋಧನೆ ಸಮಿತಿಯು ಜಿಲ್ಲಾ ಸಂಚಾಲಕ ರಾಮ ಮರಾಠಿ ಎಲಕೊಟ್ಟಗಿ, ಮಹೇಶ ನಾಯ್ಕ ಸಾಲ್ಕೋಡ, ವಿನೋದ ನಾಯ್ಕ ನೇತೃತ್ವದ ತ್ರಿಸದ್ಯಸರ ಸಮಿತಿ ಸ್ಥಳ ಭೇಟಿ, ನೀಡಿ ದಾಖಲೆ ಪರಿಶೀಲಿಸಿ, ಅರಣ್ಯ ಸಿಬ್ಬಂದಿಗಳು ದೌರ್ಜನ್ಯ ಎಸಗಿರುವ ಸಂದರ್ಭ ವಿಡಿಯೋ ಪರಿಶೀಲಿಸಿ ನೀಡಿದ ವರದಿ ಆಧಾರದ ಮೇಲೆ ಮೇಲಿನಂತೆ ಹೇಳಿಕೆಯನ್ನ ಪ್ರಕಟಿಸಿದ್ದೆನೆಂದು ಲಿಖಿತ ಪ್ರಕಟಣೆಯಲ್ಲಿ ಅವರು ತಿಳಿಸಿದ್ದಾರೆ.

ಅನಾದಿಕಾಲದಿಂದಲೂ ನೆರೆಹಾವಳಿಯ ಸಂದರ್ಭದಲ್ಲಿ ಸಾಗುವಳಿ ಮಾಡಿದಂತ ಕ್ಷೇತ್ರದಲ್ಲಿ ಗೇರು, ತೆಂಗು ಅಡಿಕೆ ಮರ ಸಾಗುವಳಿ ಕ್ಷೇತ್ರದ ಬೇಲಿಯನ್ನ ನಾಶಪಡಿಸಿ ತೆಂಗು ಮರವನ್ನು ಬುಡ ಸಮೇತ ಕಿತ್ತು ಸಾಗುವಳಿ ಕ್ಷೇತ್ರದಲ್ಲಿರುವ  ಗಿಡಮರಗಳನ್ನು ನಾಶಪಡಿಸಿರುವ ಅಂಶವನ್ನು  ವರದಿಯಲ್ಲಿ ಧೃಡಪಡಿಸಿರುತ್ತಾರೆ ಎಂದು ಅವರು ತಿಳಿಸಿದ್ದಾರೆ

300x250 AD

ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಕ್ಷೇತ್ರಕ್ಕೆ ಅರಣ್ಯ ಸಿಬ್ಬಂದಿಯಿಂದ ಜಿಪಿಎಸ್ ೫-೨೮-೦೦ ಗುಂಟೆಗೆ ಜಿಪಿಎಸ್ ಆಗಿದ್ದು ಇರುತ್ತದೆ. ಗ್ರಾಮ ಪಂಚಾಯತಿಯಿಂದ ಮನೆ ನಂಬರ್ ದಾಖಲೆಯು ಇರುವುದಾಗಿ ವರದಿಯಲ್ಲಿ ಉಲ್ಲೇಖಿಸಲ್ಪಟಿದೆ ಎಂದು ಅವರು ಹೇಳಿದ್ದಾರೆ.

ವರ್ತನೆ ಸಮಂಜಸವಲ್ಲ:
ಏಕಾಏಕಿಯಾಗಿ ಸಾಗುವಳಿ ಕ್ಷೇತ್ರಕ್ಕೆ ೩೦ ಕ್ಕಿಂತ ಹೆಚ್ಚು ಅರಣ್ಯ ಸಿಬ್ಬಂದಿಗಳು ಪೋಲೀಸ್ ರಕ್ಷಣೆಯೊಂದಿಗೆ ಪ್ರವೇಶಿಸಿ, ಚಿತ್ರಿಕರಿಸುತ್ತಿರುವ ಮೊಬೈಲ್‌ನ ಕಸಿದುಕೊಂಡು, ಮಹಿಳಾ ಅಧಿಕಾರಿ ದರ್ಪದಿಂದ ವರ್ತಿಸಿ, ೪೦ ವರ್ಷದ ಗೇರು ಮರ ಮಧ್ಯದಲ್ಲಿರುವ ಗಿಡ ಬುಡ ಸಹಿತ ಕಿತ್ತು ನಾಶಪಡಿಸಿ ಅರಣ್ಯವಾಸಿಗಳ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಉದ್ದೇಶ ಪೂರ್ವಕವಾಗಿ ನ್ಯಾಯಾಧೀಶರ ಮನೆಗೆ ರಾತ್ರಿ ಹಾಜರಪಡಿಸಿ ಮತ್ತು ಅರಣ್ಯ ಕಛೇರಿಯಲ್ಲಿ ಅನಾಗರಿಕವಾಗಿ ವರ್ತಿಸಿ ಕ್ರಮದ ವರ್ತನೆಯನ್ನ ಹಿರಿಯ ಅಧಿಕರಾರಿಗಳಿಗೆ ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ಪ್ರಶ್ನಿಸಿದ್ದಾರೆ.

Share This
300x250 AD
300x250 AD
300x250 AD
Back to top