ಸಿದ್ದಾಪುರ: ತಾಲೂಕಿನ ಬಿದ್ರಕಾನ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘಕ್ಕೆ ಶನಿವಾರ ನಡೆದ ಚುನಾವಣೆಯಲ್ಲಿ ಹಾಲಿ ಆಡಳಿತ ಮಂಡಳಿ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ಟ ಚಟ್ನಳ್ಳಿ ಅವರ ಬೆಂಬಲಿಗರೇ ಹೆಚ್ಚು ಆಯ್ಕೆ ಆಗಿದ್ದಾರೆ.
ಸಾಮಾನ್ಯ ಮತಕ್ಷೇತ್ರದಿಂದ ಗೋವಿಂದ ಬೀರ ಗೌಡ, ಪರಮೇಶ್ವರ ಸುಬ್ರಾಯ ಹೆಗಡೆ, ಪ್ರಕಾಶ ವಿಶ್ವೇಶ್ವರ ಹೆಗಡೆ, ಲಕ್ಷ್ಮೀಶ ಮಂಜುನಾಥ ಹೆಗಡೆ, ಸುಬ್ರಹ್ಮಣ್ಯ ಗಣಪತಿ ಭಟ್ಟ, ಸುಬ್ರಾಯ ವೆಂಕಟಗಿರಿ ಹೆಗಡೆ.
ಹಿಂದುಳಿದ ವರ್ಗ “ಎ” ಕ್ಷೇತ್ರದಿಂದ ಪರಮೇಶ್ವರ ದ್ಯಾವಾ ನಾಯ್ಕ, ಮಹಿಳಾ ಮೀಸಲು ಸ್ಥಾನಗಳಿಂದ ಸರೋಜಾ ವೆಂಕಟರಮಣ ಹೆಗಡೆ, ಸವಿತಾ ದತ್ತಾತ್ರೇಯ ಹೆಗಡೆ ಆಯ್ಕೆಯಾಗಿದ್ದಾರೆ.
ಈ ಹಿಂದಿನ ಆಡಳಿತ ಮಂಡಳಿಯ ನಿರ್ದೇಶಕರೇ ಹೆಚ್ಚಿನ ಪಾಲು ಪಡೆದು ಗೆಲುವಿನ ನಗೆ ಬೀರಿದ್ದಾರೆ.
ಸುಬ್ರಾಯ ವೆಂಕಟಗಿರಿ ಹೆಗಡೆ, ಪರಮೇಶ್ವರ ದ್ಯಾವಾ ನಾಯ್ಕ ಹಾಗೂ ಸರೋಜಾ ವೆಂಕಟರಮಣ ಹೆಗಡೆ ನೂತನವಾಗಿ ಆಯ್ಕೆಯಾದ ನಿರ್ದೇಶಕರಾಗಿದ್ದಾರೆ.
ಬಿದ್ರಕಾನ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘಕ್ಕೆ ಆಯ್ಕೆಯಾದ ನಿರ್ದೇಶಕರನ್ನು ಅಭಿನಂದಿಸಿರುವ ಟಿಎಂಎಸ್ ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ ಈ ಫಲಿತಾಂಶ ಪಾರದರ್ಶಕ ಹಾಗೂ ಪ್ರಾಮಾಣಿಕ ಆಡಳಿತಕ್ಕೆ ದೊರೆತ ವಿಜಯವಾಗಿದ್ದು ಇದು ಮುಂದೆ ನಡೆಯಲಿರುವ ಸಹಕಾರಿ ಸಂಘಗಳ ಚುನಾವಣೆಯ ದಿಕ್ಸೂಚಿಯಾಗಿದೆ ಎಂದು ತಿಳಿಸಿದ್ದಾರೆ. ಚುನಾವಣಾ ಅಧಿಕಾರಿಯಾಗಿ ಬಿದ್ರಕಾನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಾಧ್ಯಾಪಕ ಮಂಜುನಾಥ ರಾಮಕೃಷ್ಣ ಭಟ್ಟ ಕಾರ್ಯನಿರ್ವಹಿಸಿದ್ದರು. ಸಂಘದ ಮುಖ್ಯಕಾರ್ಯನಿರ್ವಾಹಕರು ಹಾಗೂ ಸಿಬ್ಬಂದಿಗಳು ಸಹಕರಿಸಿದರು.