ಸಿದ್ದಾಪುರ: ತಾಲೂಕಿನ ಬಿಳಗಿಯಲ್ಲಿರುವ ಮಧುವನ ಹಾಗೂ ಜೇನುಗಾರಿಕೆ ತರಬೇತಿ ಕೇಂದ್ರದಲ್ಲಿ ತೋಟಗಾರಿಕಾ ಇಲಾಖೆಯಿಂದ 2024-25ನೇ ಸಾಲಿನ ಜಿಲ್ಲಾ ವಲಯ ಯೋಜನೆಯಡಿ ಜೇನುಗಾರಿಕೆ ಕೌಶಲ್ಯ ತರಬೇತಿ ಕಾರ್ಯಾಗಾರ ಶನಿವಾರ ನಡೆಯಿತು.
ಜಿಲ್ಲಾ ತೋಟಗಾರಿಕಾ ಉಪನಿರ್ದೇಶಕ ಡಾ.ಬಿ.ಪಿ. ಸತೀಶ ಕಾರ್ಯಕ್ರಮ ಉದ್ಘಾಟಿಸಿ ಜೇನು ಕೃಷಿ ಮಹತ್ವ ಮತ್ತು ಇಲಾಖೆಯಿಂದ ಜೇನುಕೃಷಿಗೆ ಇರುವ ಯೋಜನೆಗಳನ್ನು ತಿಳಿಸಿದರು. ಬಿಳಗಿ ಗ್ರಾ.ಪಂ. ಉಪಾಧ್ಯಕ್ಷೆ ಸುವರ್ಣಾ ಪ್ರಭಾಕರ ನಾಯ್ಕ ಅಧ್ಯಕ್ಷತೆ ವಹಿಸಿದ್ದರು.ಗ್ರಾಪಂ ಸದಸ್ಯರಾದ ಮಾಲಿನಿ ದೇವರಾಜ ಮಡಿವಾಳ, ರಾಜು ದ್ಯಾವಾ ನಾಯ್ಕ, ವಸಂತ ದಾಸ ನಾಯ್ಕ ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಯಾಗಿ ಹಿರಿಯ ವಿಜ್ಞಾನಿ ಡಾ.ರೂಪಾ ಎಸ್.ಪಾಟೀಲ್ ಜೇನು ಕೃಷಿಯ ಕುರಿತು ಸಮಗ್ರ ಮಾಹಿತಿ ನೀಡಿದರು. ಬಾಬು ಜಾಧವ ಪ್ರಾರ್ಥನೆ ಹಾಡಿದರು. ತಾಲೂಕು ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಅರಣ ಎಚ್.ಜಿ.ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.
ಸಹಾಯಕ ತೋಟಗಾರಿಕಾ ಅಧಿಕಾರಿ ಬಸಪ್ಪ ಟಿ.ಬಂಡಿ ವಂದಿಸಿದರು.ಕಾಶೀನಾಥ ಪಾಟೀಲ್ ಕಾರ್ಯಕ್ರಮ ನಿರ್ವಹಿಸಿದರು.ಪ್ರೇಮಾ ನಾಯ್ಕ ಹಾಗೂ ಸಿಬ್ಬಂದಿಗಳು ಸಹಕರಿಸಿದರು.