Slide
Slide
Slide
previous arrow
next arrow

ತಾಯಿಯಂತೆ ಮಕ್ಕಳನ್ನು ಸಲಹುವ ಅಂಗನವಾಡಿ ಕಾರ್ಯಕರ್ತೆಯರ ಕಾರ್ಯ ಶ್ಲಾಘನೀಯ: ಭೀಮಣ್ಣ ನಾಯ್ಕ್

300x250 AD

ಸಿದ್ದಾಪುರ : ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳಿಗೆ 2ನೇ ತಾಯಿ ಇದ್ದಂತೆ, ಸಮಾಜದ ಮುಖ್ಯ ವಾಹಿನಿಗೆ ಮಕ್ಕಳನ್ನು ತರಲು ಅವರಿಗೆ ಸಂಸ್ಕಾರವನ್ನು ನೀಡಲು ಶ್ರಮಿಸುತ್ತಿರುವ ನಿಮ್ಮ ಕಾರ್ಯ ಶ್ಲಾಘನೀಯ. ನಿಮ್ಮ ಕಾರ್ಯ ವ್ಯಾಪ್ತಿ ದೊಡ್ಡದಿದ್ದರೂ  ಉತ್ತಮವಾಗಿ ಕಾರ್ಯನಿರ್ವಹಿಸುವ ಮನಸ್ಸು ನೀವು ಹೊಂದಿದ್ದೀರಿ,ಕೇಂದ್ರ ರಾಜ್ಯ  ಸರಕಾರಗಳು  ಮುಖ್ಯ ಮಂತ್ರಿಗಳು, ಸಚಿವರು ಇಲಾಖೆ ನಿಮ್ಮ ಸಮಸ್ಯೆ ಅರ್ಥೈಸಿಕೊಂಡು ಕಣ್ಣೀರು ಒರೆಸುವ ಕೆಲಸ ಮಾಡಬೇಕು ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.

 ಅವರು ಪಟ್ಟಣದ ಶಂಕರಮಠದಲ್ಲಿ ಸ್ವತಂತ್ರ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಸಂಘದವರು ಏರ್ಪಡಿಸಿದ್ದ ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕಿಯ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇಲಾಖೆ ನೀಡುವ ಸೌಲಭ್ಯಗಳನ್ನು ಮಕ್ಕಳಿಗೆ ನೀಡಿ ಅವರನ್ನು ಸದೃಢ ತನ್ನಾಗಿ ಮಾಡುವ ಕೆಲಸದ ಜೊತೆಯಲ್ಲಿ ತಂದೆ ತಾಯಿಂದ ಮನೆಯಲ್ಲಿ ನೋಡುವುದಕ್ಕಿಂತ ಹೆಚ್ಚಿನದಾಗಿ ಗಮನಕೊಟ್ಟು ಪಾಲನೆ ಮಾಡುತ್ತೀರಿ ನಿಮ್ಮ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಲೇಬೇಕು ಎಂದರು ಹಾಗೂ ನಿಮ್ಮ ಸಮಸ್ಯೆಗಳ ಕುರಿತು ಸದನದಲ್ಲಿ ಧ್ವನಿ ಎತ್ತುವೆ ಎನ್ನುವ ಭರವಸೆ ನೀಡಿದರು.

ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ಮಾತನಾಡಿ, ಪ್ರಾಥಮಿಕ ಶಾಲಾ ಪೂರ್ವ ಶಿಕ್ಷಣವನ್ನು ಅಂಗನವಾಡಿಯಲ್ಲಿ ಕಲಿಸಲಾಗುತ್ತದೆ. ಅದರ ಜೊತೆಯಲ್ಲಿ ತಮ್ಮ ಇಲಾಖೆ ಮತ್ತು ಬೇರೆ ಬೇರೆ ಇಲಾಖೆ ಕೆಲಸವನ್ನು ಸಹ ನಿರ್ವಹಿಸಬೇಕಿದೆ. ಈ ರೀತಿ ಸರಕಾರದ 10 ಹಲವು ಯೋಜನೆಗಳನ್ನು ಜನರಿಗೆ ತಲುಪಿಸುವ ಇವರಿಗೆ ಕಡಿಮೆ ವೇತನವನ್ನು ನೀಡಿ ಸರ್ಕಾರಗಳು ಕಣ್ಣೀರು ಹಾಕುವಂತೆ ಮಾಡಿವೆ. ಇತರೆ ಇಲಾಖೆ ಅಧಿಕಾರಿಗಳಿಗೆ ನೀಡುವ ಸಂಬಳದಂತೆ ಇವರಿಗೂ ಯಾಕೆ ನೀಡುತ್ತಿಲ್ಲ. ಇವರೇನು ಕೆಲಸ ಮಾಡುತ್ತಿಲ್ಲವಾ ಎಂದು ಪ್ರಶ್ನಿಸಿದರು. ಆದಷ್ಟು ಬೇಗ ನಿಮ್ಮ ಸಮಸ್ಯೆಗಳು ಬಗೆಹರಿಯಲಿ. ಮುಂದಿನ ದಿನದಲ್ಲಿ ನೀವು ಯಾವುದೇ ಹೋರಾಟಕ್ಕೂ ಕರೆದರೂ ನಾನು ಬರಲು ಸಿದ್ಧನಿದ್ದೇನೆ ಎಂದರು. ಸಂಘಟನೆಯ ರಾಜ್ಯಾಧ್ಯಕ್ಷೆ  ಜಿ. ಪ್ರೇಮಾ, ಜಿಲ್ಲಾಧ್ಯಕ್ಷೆ  ಅನಿತಾ ಶೇಟ್, ಸಿಡಿಪಿಒ ಪೂರ್ಣಿಮಾ ದೊಡ್ಮನಿ ಮಾತನಾಡಿದರು. ಕೃಷ್ಣಮೂರ್ತಿ ಐಸೂರ ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಅಂಗನವಾಡಿ ಕಾರ್ಯಕರ್ತೆಯರು ಸಹಾಯಕರಿಗೆ ಸನ್ಮಾನಿಸಿ ಗೌರವಿಸಿದರು.

 ತಾಲೂಕ ಅಧ್ಯಕ್ಷೆ  ಯಮುನಾ ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು. ಭಾರತಿ ನಾಯ್ಕ ಸ್ವಾಗತಿಸಿದರು. ರೇಖಾ  ಹೆಗಡೆ ನಿರೂಪಿಸಿದರು. ಶೋಭಾ ನಾಯ್ಕ  ವಂದಿಸಿದರು. 

300x250 AD

Box 

ಕನಿಷ್ಠ ವೇತನ, ಹೆಚ್ಚುವರಿ ಕೆಲಸ, ಕಡಿತಗೊಳಿಸಬೇಕು, ಮಿನಿಕೇಂದ್ರವನ್ನ ಮೇನ್ ಗೆ ಸೇರಿಸಬೇಕು ಇಲ್ಲಾ ಸಮಾನ ವೇತನ ನೀಡಬೇಕು, ಸಿಮ್ ರಿಚಾರ್ಜ್ ಆಗಬೇಕು, ಅರೋಗ್ಯ ಸೌಲಭ್ಯ (ESI ) ಒದಗಿಸಬೇಕು. ಗುಣಮಟ್ಟದ ಮೊಬೈಲ್ ನೀಡಬೇಕು, ಮೊಬೈಲ್ ಅಥವಾ ದಾಖಲೆ ನಿರ್ವಹಣೆ ಎರಡರಲ್ಲಿ ಒಂದನೇ ಇಡಬೇಕು. ಅರೋಗ್ಯ ಸಮಸ್ಯೆ ಉಂಟಾದಾಗ ಒಂದು ವಾರ ವೇತನ ಸಹಿತ ರಜೆ ನೀಡಬೇಕು ಎನ್ನುವ ಕಾರ್ಯಕರ್ತೆರ ಒತ್ತಾಯ ಕೇಳಿ ಬಂದಿತು.

Share This
300x250 AD
300x250 AD
300x250 AD
Back to top