Slide
Slide
Slide
previous arrow
next arrow

ಆಶಾಕಿರಣ ಟ್ರಸ್ಟ್‌ನಿಂದ ಸದ್ಭಾವನಾ ಪ್ರಶಸ್ತಿ ಪ್ರದಾನ

300x250 AD

ಸಿದ್ದಾಪುರ: ಆಶಾಕಿರಣ ಟ್ರಸ್ಟ್ ಸಿದ್ದಾಪುರ ಇದರ ವತಿಯಿಂದ ಸದ್ಭಾವನಾ ಪ್ರಶಸ್ತಿಯನ್ನು ಮನುವಿಕಾಸ ಸಂಸ್ಥೆ ಕರ್ಜಗಿ ಹಾಗೂ ಅಜಿತ ಮನೋಚೇತನ ಸಂಸ್ಥೆ ಶಿರಸಿ ಇವರಿಗೆ ನೀಡಲಾಯಿತು.

ಲಯನ್ಸ್ ಕ್ಲಬ್ ಸಿದ್ದಾಪುರ ಇದರ ಸಹಯೋಗದೊಂದಿಗೆ ಡಾ. ಎ.ಪಿ.ಜಿ. ಅಬ್ದುಲ್ ಕಲಾಂ ಇವರ ಜನ್ಮದಿನೋತ್ಸವ ಅಂಗವಾಗಿ ಹಾಗೂ ಮಹಾದೇವಿ ತಾಯಿ ದೊಡ್ಮನೆ ಇವರ ಸಂಸ್ಮರಣಾ ದಿನ ಪ್ರಯುಕ್ತ ಸದ್ಭಾವನಾ ದಿನ ಆಚರಣೆ ಹಾಗೂ ಪ್ರಶಸ್ತಿ ವಿತರಣಾ ಸಮಾರಂಭವನ್ನು ಶಾಸಕ ಭೀಮಣ್ಣ ಟಿ. ನಾಯ್ಕ ಅವರು ಉದ್ಘಾಟಿಸಿ ಮಾತನಾಡಿ ಸಾಮಾಜಿಕ ಕ್ಷೇತ್ರದಲ್ಲಿ ಅಪಾರವಾದ ಸೇವೆಯನ್ನು ಸಲ್ಲಿಸಿದ ಹಾಗೂ ಕೃಷಿ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡ ಎರಡು ಸಂಸ್ಥೆಯವರಿಗೆ ಸದ್ಭಾವನಾ ಪ್ರಶಸ್ತಿ ನೀಡುವುದು ಅತ್ಯುತ್ತಮವಾದ ಕಾರ್ಯವಾಗಿದೆ. ದನಿಯಿಲ್ಲದ ದುರ್ಬಲ ವರ್ಗಕ್ಕೆ ವಿಶೇಷ ಚೇತನರಿಗೆ ಸಹಾಯವನ್ನು ಕಲ್ಪಿಸಿ ಅವರಿಗಾಗಿ ಶಿಕ್ಷಣ ನೀಡುವ ಮಹಾನ್ ಕೆಲಸವನ್ನು ಡಾ. ರವಿ ಹೆಗಡೆ ಹೂವಿನ್ಮನೆ ಹಾಗೂ ಅವರ ತಂಡದವರು ಅತ್ಯುತ್ತಮವಾಗಿ ನಿರ್ವಹಿಸಿಕೊಂಡು ಬರುತ್ತಿದ್ದಾರೆ. ಇದಕ್ಕೆ ಸರಕಾರದ ಹಾಗೂ ಸಾರ್ವಜನಿಕರ ಸಹಾಯ ಹಸ್ತ ಸಿಗಬೇಕು ಎಂದು ಹೇಳಿದರು.

ಶಿರಸಿಯ ಅಜಿತ ಮನೋಚೇತನ ಸಂಸ್ಥೆಯ ಅಧ್ಯಕ್ಷರಾದ ಸುಧೀರ ಭಟ್ ಅವರಿಗೆ ಹಾಗೂ ಮನೋವಿಕಾಸ ಸಂಸ್ಥೆ ಕರ್ಜಗಿ ಇದರ ಮುಖ್ಯಸ್ಥರಾದ ಹರಿಶ್ಚಂದ್ರ ಭಟ್ ಅವರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

300x250 AD

ಮುಖ್ಯಅತಿಥಿಯಾಗಿ ಸ್ಥಳೀಯ ಟಿ.ಎಂ.ಎಸ್. ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ ಮಾತನಾಡಿ ಆಶಾಕಿರಣ ಟ್ರಸ್ಟ್ ಅತ್ಯುತ್ತಮವಾದ ಕೆಲಸವನ್ನು, ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡು ವಿಶೇಷ ಚೇತನರ ಶಿಕ್ಷಣ ಮತ್ತು ಮಹಿಳೆಯರ ಸ್ವಯಂ ಉದ್ಯೋಗ ನಿರ್ವಹಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು.
ಪ್ರಶಸ್ತಿಗೆ ಪಾತ್ರರಾದ ಸುಧೀರ ಭಟ್ ಶಿರಸಿ ಮಾತನಾಡಿ ತಮ್ಮ ಸಂಸ್ಥೆಯ ಪ್ರಗತಿಯನ್ನು ಕಂಡು ಪ್ರಶಸ್ತಿ ನೀಡಿರುವುದಕ್ಕೆ ಸಂತಸ ವ್ಯಕ್ತ ಪಡಿಸಿದರು. ಇನ್ನೋರ್ವ ಪ್ರಶಸ್ತಿ ಪುರಸ್ಕೃತ ಸಂಸ್ಥೆ ಮನುವಿಕಾಸ ಸಂಸ್ಥೆಯ ಪರವಾಗಿ ಅಧ್ಯಕ್ಷ ಗಣಪತಿ ಭಟ್ ಮಾತನಾಡಿ ರಾಜ್ಯದ ಅರ್ಧ ಭಾಗದಲ್ಲಿ ಕೃಷಿ ಹೊಂಡ ಹಾಗೂ ಕೆರೆಗಳ ಹೂಳೆತ್ತುವಿಕೆ ಮುಂತಾದ ಕೆಲಸಗಳನ್ನು ನಿರ್ವಹಿಸುತ್ತಾ ಬಂದಿದೆ. ಇದು ಪ್ರಕೃತಿಗೆ ಪೂರಕವಾದ ಕೆಲಸ ಎಂದು ಹೇಳಿದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಎ.ಜಿ. ನಾಯ್ಕ ಹಾಗೂ ಶಿರಸಿ ಲಯನ್ಸ್ ವಲಯ ಅಧ್ಯಕ್ಷ ಅಶೋಕ ಹೆಗಡೆ ಹಾಗೂ ಸ್ಥಳೀಯ ಲಯನ್ಸ್ ಕಾರ್ಯದರ್ಶಿ ಕುಮಾರ ಗೌಡರ್ ಮಾತನಾಡಿದರು.

ಅಧ್ಯಕ್ಷತೆಯನ್ನು ಆಶಾಕಿರಣ ಟ್ರಸ್ಟ್‌ನ ಅಧ್ಯಕ್ಷ ಡಾ. ರವಿ ಹೆಗಡೆ ಹೂವಿನ್ಮನೆ ಅವರು ವಹಿಸಿ ಮಾತನಾಡಿ ಅಂಧ ಮಕ್ಕಳ ಶಿಕ್ಷಣ ವ್ಯವಸ್ಥೆಗೆ ಆಶಾಕಿರಣ ಟ್ರಸ್ಟ್ ಶ್ರಮಿಸುತ್ತಿದ್ದು, ಅದರ ಜೊತೆಯಲ್ಲಿ ಹೆಣ್ಣುಮಕ್ಕಳ ಉದ್ಯೋಗಾವಕಾಶಕ್ಕಾಗಿ ಹೊಲಿಗೆ ತರಬೇತಿಯನ್ನು ನೀಡಿ ಪ್ರೋತ್ಸಾಹಿಸುತ್ತಿದ್ದು ಒಂದು ಜನಪರವಾದ ಕೆಲಸವಾಗಿದೆ. ಇದನ್ನು ನಿರ್ವಹಿಸುವಲ್ಲಿ ಸಹಕರಿಸಿದ ಎಲ್ಲಾ ಸದಸ್ಯರಿಗೆ ಧನ್ಯವಾದವನ್ನು ಹೇಳಿದರು.
ವೇದಿಕೆಯಲ್ಲಿ ಲಯನ್ಸ್ ಕೋಶಾಧ್ಯಕ್ಷ ಆಕಾಶ ಹೆಗಡೆ ಗುಂಜಗೋಡ ಹಾಗೂ ಕಾರ್ಯಕ್ರಮದ ಸಂಯೋಜಕರಾದ ಮಧುಮತಿ ಶೀಗೇಹಳ್ಳಿ ಹಾಗೂ ಆಶಾಕಿರಣ ಟ್ರಸ್ಟ್ನ ಕೋಶಾಧ್ಯಕ್ಷ ನಾಗರಾಜ ದೋಶೆಟ್ಟಿ ಅವರು ಉಪಸ್ಥಿತರಿದ್ದರು.
ಸನ್ಮಾನಪತ್ರವನ್ನು ಮಧುಮತಿ ಶೀಗೇಹಳ್ಳಿ ಹಾಗೂ ನಾಗರಾಜ ದೋಶೆಟ್ಟಿ ಅವರು ವಾಚನ ಮಾಡಿದರು. ಜ.ಮು.ರಾ. ಅಂಧರ ಶಾಲೆಯ ಮಕ್ಕಳಿಂದ ಪ್ರಾರ್ಥನೆ ನಡೆಯಿತು. ಅಂಧರ ಶಾಲೆಯ ವಿದ್ಯಾರ್ಥಿ ಸಹನಾ ಗೌಡ ಅವರಿಂದ ಸ್ವಾಗತ ಹಾಗೂ ಮಹೇಂದ್ರ ಎಸ್. ಅವರಿಂದ ವಂದನಾರ್ಪಣೆ ನಡೆಯಿತು. ಜಿ.ಜಿ. ಹೆಗಡೆ ಬಾಳಗೋಡ ಅವರು ನಿರೂಪಿಸಿದರು.

Share This
300x250 AD
300x250 AD
300x250 AD
Back to top