ಶಿರಸಿ: ಸೋಂದಾದ ಮೂರು ಧರ್ಮ ಪೀಠಗಳ ಸಹಯೋಗದೊಂದಿಗೆ ಜಾಗೃತ ವೇದಿಕೆ ಸೋಂದಾದ ದ ಸಂಘಟನೆಯಲ್ಲಿ ಅ.19,20ರಂದು 7ನೇ ವರ್ಷದ ಸೋಂದಾ ಇತಿಹಾಸೋತ್ಸವ ಮತ್ತು ರಾಷ್ಟ್ರ ಮಟ್ಟದ ಇತಿಹಾಸ ಸಮ್ಮೇಳನ ಹಾಗು ಸೋದೆ ಸದಾಶಿವರಾಯ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ.
ಇತಿಹಾಸದೆಡೆಗೆ ಸಮಾಜದಲ್ಲಿ ಜಾಗೃತಿ ಪ್ರಾದೇಶಿಕ ಇತಿಹಾಸಕ್ಕೆ ಪ್ರಾಮುಖ್ಯತೆ ಮತ್ತು ಸೋದೆ ಸದಾಶಿವರಾಯರನ್ನು ಚಿರಸ್ಮರಣೀಯಗೊಳಿಸುವುದೇ ಇತಿಹಾಸೋತ್ಸವದ ಆಶಯ. ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಡಾ.ವಸುಂಧರಾ ಫಿಲಿಯೋಜ ವಹಿಸಲಿದ್ದು, ಸ್ವರ್ಣವಲ್ಲೀ ಮತ್ತು ಜೈನಮಠದ ಶ್ರೀಗಳವರು ದಿವ್ಯ ಸಾನಿಧ್ಯ ನೀಡಲಿದ್ದಾರೆ.
ಸಮ್ಮೇಳನದ ಉದ್ಘಾಟನೆಯನ್ನು ಪರಂಪರೆ ಇಲಾಖೆ ಆಯುಕ್ತ ದೇವರಾಜ್ ಎ. ನೆರವೇರಿಸಲಿದ್ದು, ಮುಖ್ಯ ಅತಿಥಿಗಳಾಗಿ ಸೋದೆ ಅರಸುವಂಶಸ್ಥ ಮಧುಲಿಂಗ ನಾಗೇಶ ರಾಜೇಂದ್ರ ಒಡೆಯರ್ ಗೋವಾ, ಮಿಥಿಕ್ ಸೊಸೈಟಿ ಬೆಂಗಳೂರು ಇದರ ಉಪಾಧ್ಯಕ್ಷೆ ಡಾ.ವಿ ಅನುರಾಧಾ, ಹಾಗೂ ವಿಶೇಷ ಆಮಂತ್ರಿತರಾಗಿ ಪ್ರೊ. ಪೇರ್ ಸಿಲ್ವಿನ್ ಫಿಲಿಯೋಜ ಪ್ರಾನ್ಸ್ ಉಪಸ್ಥಿತರಿರಲಿದ್ದಾರೆ. ಡಾ.ಲಕ್ಷ್ಮೀಶ್ ಸೋಂದಾ ಆಶಯ ನುಡಿಗಳನ್ನಾಡಲಿದ್ದು, ಸದಾಶಿವರಾಯ ಪ್ರಶಸ್ತಿಗೆ ಡಾ.ಪರಮಶಿವಮೂರ್ತಿ ಭಾಜನರಾಗಿದ್ದಾರೆ. ಒಟ್ಟೂ ಏಳು ಗೋಷ್ಠಿಯಲ್ಲಿ ೪೦ ಇತಿಹಾಸ ಸಂಶೋಧಕರಿಂದ ಪ್ರಬಂಧ ಮಂಡನೆ ನಡೆಯಲಿದೆ.ಸಂಜೆ ೬ ರಿಂದ ನಡೆಯುವ ಸಾಂಸ್ಕೃತಿಕ ಸಂಭ್ರಮದಲ್ಲಿ ಉನ್ಮತ್ತ ಕೀಚಕ ಯಕ್ಷನೃತ್ಯವನ್ಮು ಚರಿತ್ ಹೆಗಡೆ ಸೋಂದಾ, ವಿಸ್ಮಯ,ಸಿಂಚನ ಹೆಗಡೆ ಮತ್ತು ಚಂದನ್ ಭಟ್ ಪ್ರಸ್ತುತ ಪಡಿಸಲಿದ್ದಾರೆ.
ಎರಡನೇ ದಿನ ಸಂಜೆ ೪ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ ಭೀಮಣ್ಣ ನಾಯ್ಕ್, ಪರಂಪರೆ ಇಲಾಖೆಯ ಉಪನಿರ್ದೇಶಕರಾದ ಡಾ.ಮಂಜುಳಾ ,ಸೋಂದಾ ಗ್ರಾ.ಪಂ ಅಧ್ಯಕ್ಷರಾದ ರಾಮಚಂದ್ರ ಹೆಗಡೆ ಹೊಸಗದ್ದೆ, ಮೂರು ಮಠಗಳ ಪ್ರತಿನಿಧಿಗಳು,ಜಾಗೃತ ವೇದಿಕೆಯ ಪಧಾದಿಕಾರಿಗಳು ಉಪಸ್ಥಿತರಿರಲಿದ್ದಾರೆ.