ದಾಂಡೇಲಿ : ನಗರದ ಹಳೆ ನಗರಸಭೆ ಮೈದಾನದಲ್ಲಿ ದಾಂಡೇಲಿ ನವರಾತ್ರಿ ಉತ್ಸವ ಸಮಿತಿಯ ಆಶ್ರಯದಡಿ ನಡೆಯುತ್ತಿರುವ ನವರಾತ್ರಿ ಉತ್ಸವದಲ್ಲಿ ನಡೆದ ಸ್ಥಳೀಯ ಕಲಾವಿದರುಗಳ ಕರೋಕೆ ರಸಮಂಜರಿ ಕಾರ್ಯಕ್ರಮ ಅತ್ಯುತ್ತಮವಾಗಿ ಮೂಡಿ ಬಂತು.
ಸ್ಥಳೀಯ ಪ್ರತಿಭೆಗಳ ಸುಮಧುರ ಕಂಠದ ಗಾಯನಕ್ಕೆ ಪ್ರೇಕ್ಷಕರು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ದಾಂಡೇಲಿ ಸಾರಿಗೆ ಘಟಕದ ವ್ಯವಸ್ಥಾಪಕರಾದ ಕೆ.ಎಲ್.ರಾಥೋಡ್, ಎ.ಎಸ್.ಐ ಗಿರೀಶ ಸೂರ್ಯವಂಶಿ, ಅಂಚೆಯಣ್ಣ ರಘುವೀರ ಗೌಡ, ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿರುವ ಸ್ಥಳೀಯ ಗಾಯಕ ಅಮಿತ್ ಬಾಗಾಡೆ, ಸ್ಥಳೀಯ ಹೆಸರಾಂತ ಗಾಯಕರುಗಳಾದ ರಾಹುಲ್ ಬನ್ಸೋಡೆ, ಅಜಯ್ ಶಿರೋಡ್ಕರ್, ವಿಜಯ್ ಚೌಹ್ವಾಣ್, ಚೇತನ್ ಗಡ್ಕರ್, ಪ್ರಕಾಶ್ ಗುಂಡೊಳ್ಳಿ, ಕಿರಣ್ ಗುಂಡೊಳ್ಳಿ, ರಣಜಿತ್ ಪಾಟೀಲ್, ಮಹಾಂತೇಶ್ ಅಂಧಕಾರ ಹಾಗೂ ಪ್ರಕಾಶ್ ಜೈನ್ ಮೊದಲಾದವರು ತಮ್ಮ ಅತ್ಯದ್ಭುತ ಕಂಡ ಸಿರಿಯ ಮೂಲಕ ಹಾಡಿ ಪ್ರೇಕ್ಷಕರನ್ನು ಮನರಂಜಿಸಿದರು.
ಈ ಸಂದರ್ಭದಲ್ಲಿ ದಾಂಡೇಲಿ ನವರಾತ್ರಿ ಉತ್ಸವ ಸಮಿತಿಯ ಅಧ್ಯಕ್ಷರಾದ ಟಿ.ಎಸ್.ಬಾಲಮಣಿ, ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷರಾದ ಪ್ರಕಾಶ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ನರೇಂದ್ರ ಚೌಹ್ವಾಣ್, ಖಜಾಂಚಿ ಅಶುತೋಷ್ ಕುಮಾರ್ ರಾಯ್ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಸದಸ್ಯರು ಕಲಾವಿದರನ್ನು ಗೌರವಿಸಿದರು. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿದ್ದರು.