Slide
Slide
Slide
previous arrow
next arrow

“ಅಷ್ಟ ಮಂಗಲ ಒಂದು ಚಿಂತನೆ” ಉಪನ್ಯಾಸ ನೀಡಿದವಿ.ರಘುಪತಿ ಭಟ್

300x250 AD

ಶಿರಸಿ: ಚೆನ್ನಾಗಿ ಬಾಳಿ ಬದುಕಿದ ಕುಟುಂಬ ಕ್ರಮೇಣ ಯಾವುದೋ ಕಾರಣದಿಂದ ಅಧಃಪತನಕ್ಕೆ ಬಲಿಯಾಗುತ್ತದೆ, ಉಚ್ಛ್ರಾಯ ಸ್ಥಿತಿಯಲ್ಲಿದ್ದ ದೇವಸ್ಥಾನವೊಂದು ತೇಜಸ್ಸು ಕಳೆದುಕೊಂಡು ಪಾಳು ಬೀಳುತ್ತದೆ. ಹೀಗಾದಾಗ ಮನೆಯ ಯಜಮಾನ ಅಥವಾ ದೇವಸ್ಥಾನದ ಮೊಕ್ತೇಸರರು ಅಷ್ಟ ಮಂಗಲದ ಪ್ರಶ್ನೆಯ ಮೂಲಕ ಪುನಃ ಹಳೆಯ ತೇಜಸ್ಸನ್ನು ಪಡೆಯಬಹುದಾಗಿದೆ. ಗಣಿತದ ಲೆಕ್ಕಾಚಾರದ ಮೂಲಕ ದ್ವಾದಶ ರಾಶಿಗಳ, ನವಗ್ರಹಗಳ ಹಾಗೂ ಅಷ್ಟ ಮಂಗಲ ದ್ರವ್ಯಗಳನ್ನು ಸಾಕ್ಷಿಯಾಗಿಟ್ಟುಕೊಂಡು ಶಿಶು ವಯದ ಕುಮಾರ ಅಥವಾ ಕನ್ನೆ(ಹುಡುಗಿ)ಯ ಸಹಕಾರದಿಂದ ಲಗ್ನ ಗುರುತಿಸಿಕೊಂಡು ದೈವಜ್ಞ ಹಾಗೂ ಸಹ ದೈವಜ್ಞರು ಪ್ರಶ್ಚಕ ಪ್ರಶ್ನೆಗಳನ್ನು ಕೇಳುವಾಗ ಇದ್ದ ಸ್ಥಿತಿಯನ್ನು ಪರಿಗಣನೆಗೆ ತೆಗೆದುಕೊಂಡು, ಪ್ರಶ್ಚಕ ಧರಿಸಿದ ಬಟ್ಟೆ, ನಿಂತ ಭಂಗಿ, ಆತ ನಿಂತ ರಾಶಿ ಮುಂತಾದವುಗಳ ಸಹಕಾರದಿಂದ ಅಷ್ಟ ಮಂಗಲ ಪ್ರಶ್ನೆಗಳಿಗೆ ಸಮಾಧಾನ ಕಂಡುಕೊಳ್ಳುತ್ತಾರೆ ಎಂದು ಮಂಗಳೂರಿನ ವಿದ್ವಾನ ರಘುಪತಿ ಭಟ್ಟರು ಹೇಳಿದರು.

ಅವರು ಶಿರಸಿಯ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಏರ್ಪಡಿಸಿದ ನೆಮ್ಮದಿ ಮಾಸದ ಮಾತು ನಿಮಿತ್ತ  ಅ.1ರಂದು ನೆಮ್ಮದಿ ಕುಟೀರದಲ್ಲಿ ಉಪನ್ಯಾಸ ನೀಡಿದರು. ಇದೇ ಸಮಯದಲ್ಲಿ ಅನಂತ ಹೆಗಡೆ ಬಾಳೆಗದ್ದೆ ಅವರ ತಂದೆ ದಿ|| ಶಿವರಾಮ ಹೆಗಡೆ ಅವರು ಬರೆದ “ಬಾಳಿನ ಸುಳಿ ಮತ್ತು ಇತರೆ ಕಥೆಗಳು” ಪುಸ್ತಕದ ಮರುಮುದ್ರಣದ ಕೃತಿಯ ಬಿಡುಗಡೆಯಾಯಿತು. ಅನಂತ ಹೆಗಡೆಯವರು ತಮ್ಮ ತಂದೆ ತನಗೆ ಹೇಗೆ ಪ್ರೇರಣೆಯಾಗಿದ್ದರು ಎಂಬ ಕುರಿತು ಮಾತನಾಡಿದರು.
ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ರಾಜ್ಯ ಕಾರ್ಯಕಾರಣೀಯ ಆಮಂತ್ರಿತ ಸದಸ್ಯ ಜಗದೀಶ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು.
ಪ್ರಾರಂಭದಲ್ಲಿ ಶ್ರೀಮತಿ ರೋಹಿಣಿ ಹೆಗಡೆ ಹಾಗೂ ಶ್ರೀಮತಿ ಆಶಾ ಹೆಗಡೆ ಅವರು ಪ್ರಾರ್ಥನೆ ಹಾಡಿದರು. ಗಣಪತಿ ಭಟ್ಟ ವರ್ಗಾಸರ ಪ್ರಾಸ್ತಾವಿಕವಾಗಿ ಮಾತನಾಡಿ ವಿದ್ವಾನ ರಘುಪತಿ ಭಟ್ಟ ಹಾಗೂ ಶಿವರಾಮ ಹೆಗಡೆ ಅವರ ಪರಿಚಯ ನೀಡಿದರು. ರಘುಪತಿ ಭಟ್ಟ ಹಾಗೂ ಅನಂತ ಹೆಗಡೆಯವರಿಗೆ ಶಾಲು ಹೊದಿಸಿ ಸನ್ಮಾನ ಮಾಡಲಾಯಿತು. ಕೃಷ್ಣ ಪದಕಿ ಸ್ವಾಗತ ಮಾಡಿದರು ಕೊನೆಯಲ್ಲಿ ಮನೋಹರ ಮಲ್ಮನೆ ವಂದಿಸಿದರು.

300x250 AD
Share This
300x250 AD
300x250 AD
300x250 AD
Back to top