Slide
Slide
Slide
previous arrow
next arrow

ಸಾಮಾಜಿಕ ಅಗತ್ಯ ಅನುಲಕ್ಷಿಸಿ ಕೈಗೊಳ್ಳುವ ಸಂಶೋಧನೆಯ ಗುರಿ ಬೇರೆಯೇ ಆಗಿದೆ: ಎಂ.ಆರ್.ನಾಗರಾಜು

300x250 AD

ಶಿರಸಿ: ಸ್ವಸಾಮರ್ಥ್ಯ, ಸಾಂದರ್ಭಿಕ ಲಭ್ಯತೆ ಆಧರಿಸಿ ಕೈಗೊಳ್ಳುವ ಸಂಶೋಧನೆಗಿಂತ ಸಾಮಾಜಿಕ ಅಗತ್ಯಗಳನ್ನು ಅನುಲಕ್ಷಿಸಿ ಕೈಗೊಳ್ಳುವ ಸಂಶೋಧನೆಯ ಗುರಿ, ದಾರಿ ಮತ್ತು ಪರಿ ಬೇರೆಯೇ ಆದುದು. ಅಂತಹ ನವ ಸಂಶೋಧನೆಗಳು ಉಪಯುಕ್ತವೂ, ಗಮನಾರ್ಹವೂ ಆಗಬಲ್ಲದು ಎಂದು- ಬೆಂಗಳೂರಿನ ಖ್ಯಾತ ಚಿಂತಕರು, ಶಿಕ್ಷಣತಜ್ಞರೂ ಆದ ಪ್ರೊ.ಎಂ.ಆರ್. ನಾಗರಾಜು ಇತ್ತೀಚೆಗೆ ಶಿರಸಿಯ ಎಂ. ಎಂ. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಐಐಸಿ(ಇನಸ್ಟಿಟ್ಯೂಷನ್ಸ್ ಇನ್ನೋವೇಷನ್ ಕೌಂನ್ಸಿಲ್) ಇದರ 2024-25 ನೇ ಸಾಲಿನ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

“ನಾವಿನ್ಯತೆ ಹಾಗೂ ಅದರ ಪ್ರಸಕ್ತತೆ” ಎಂಬ ವಿಷಯ ಕುರಿತು ಅವರು ಮಾತನಾಡುತ್ತಾ, ಜ್ಞಾನಕೇಂದ್ರಿತ ಸಂಶೋಧನೆಯಲ್ಲೇ ತೊಡಗಿದ್ದ ವಿಜ್ಞಾನಿಯೊಬ್ಬರು ನವೀನ ಸಂಶೋಧನೆಯಲ್ಲಿ ತೊಡಗಿದ ರೀತಿ ಮತ್ತು ಅವರು ಎದುರಿಸಿದ ಸಮಸ್ಯೆಗಳು, ಪರಿಹರಿಸಿಕೊಂಡ ರೀತಿಗಳನ್ನು ಕೆಲವು ಸಂಶೋಧನಾ ಪ್ರಸಂಗಗಳ ಮೂಲಕ ವಿವರಿಸಿದರು. ತಂತ್ರಜ್ಞಾನವನ್ನು ಗ್ರಾಮೀಣ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಬೆಂಗಳೂರಿನ ಕೆ.ಎಸ್.ಸಿ.ಎಸ್.ಟಿ. ಹಾಗೂ ಅಸ್ತ್ರಾ ಸಂಸ್ಥೆಗಳು ಸುಧಾರಿತ ಒಲೆ, ಕೈಪಂಪು, ಗೋಬರ್ ಅನಿಲ ಸ್ಥಾವರ, ಮುಂತಾದವುಗಳನ್ನು ಅಭಿವೃದ್ಧಿಪಡಿಸಿದ ಕುರಿತು ಮನೋಜ್ಞವಾಗಿ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಪ್ರೊ. ಜಿ. ಟಿ. ಭಟ್ಟ ವಹಿಸಿದ್ದರು. ಐಐಸಿಯ ಅಧ್ಯಕ್ಷರಾದ ಡಾ. ಗಣೇಶ ಎಸ್. ಹೆಗಡೆ ಪ್ರಾಸ್ತಾವಿಕ ನುಡಿಗಳನ್ನಾಡಿದರೆ, ವಿದ್ಯಾರ್ಥಿ ಕಾರ್ಯದರ್ಶಿ ಪವನ್‌ಕುಮಾರ್ ಹರಿಗದ್ದೆ ವಂದಿಸಿದರು, ಕುಮಾರಿ ಶ್ರೀಲೇಖಾ ಭಟ್ಟ ನಿರೂಪಿಸಿದರು.

300x250 AD
Share This
300x250 AD
300x250 AD
300x250 AD
Back to top