ಕಾರವಾರ: ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ, ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಉತ್ತರ ಕನ್ನಡ ಹಾಗೂ ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರ, ಕಾರವಾರ ಇವರ ಸಹಯೋಗದಲ್ಲಿ ಗಣಿತ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಆಮ್ಲಜನಕ ಎಂಬ ವಿಷಯದ ಮೇಲೆ ಭಟ್ಕಳ ಮತ್ತು ಹೊನ್ನಾವರ ತಾಲೂಕಿನ ಗಣಿತ ಶಿಕ್ಷಕರಿಗೆ ಸೆ.23 ಹೊನ್ನಾವರದ ನ್ಯೂ ಇಂಗ್ಲೀಷ ಸ್ಕೂಲ್ ಹೊನ್ನಾವರದಲ್ಲಿ ಹಾಗೂ ಸೆ.24 ರಂದು ಭಟ್ಕಳದ ಶಿರಾಲಿಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾರ್ಯಾಗಾರ ನಡೆಯಿತು.
ಸೆ.23 ರಂದು ಹೊನ್ನಾವರದಲ್ಲಿ ನಡೆದ ಕಾರ್ಯಗಾರವನ್ನು ಶ್ರೀ ಚೆನ್ನಕೇಶವ ಪ್ರೌಢಶಾಲೆಯ ಗಣಿತ ಶಿಕ್ಷಕ ಎಲ್.ಎಮ್.ಹೆಗಡೆ ಉದ್ಘಾಟಿಸಿದರು.
ಧಾರವಾಡದ ಹಿರೇಮಲ್ಲೂರ ಈಶ್ವರನ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜು ಗಣಿತಶಾಸ್ತç ಉಪನ್ಯಾಸಕ ಹಾಗೂ ರಾಷ್ಟ್ರೀಯ ಅತ್ಯುತ್ತಮ ಗಣಿತ ಶಿಕ್ಷಕ ಪ್ರಶಸ್ತಿ ಪ್ರಧಾನರಾದ ರವಿಪ್ರಸಾದ ಕೆ. ಕುಲಕರ್ಣಿ ಮಾತನಾಡಿ ದಿನನಿತ್ಯದ ಜೀವನದಲ್ಲಿ ಗಣಿತದ ಅನ್ವಯ ಹೇಗೆ ಆಗುತ್ತಿದೆ, ಇಂದಿನ ಪೀಳಿಗೆಯ ವಿದ್ಯಾರ್ಥಿಗಳಿಗೆ ಗಣಿತ ಒಂದು ಮೋಜಿನ ವಿಷಯ ಎಂದು ಅವರ ಬುದ್ಧಿಮತ್ತೆಯ ಅನುಗುಣವಾಗಿ ಕಲಿಸಬೇಕು, ಸಂಖ್ಯಾಶಾಸ್ತç ಹಾಗೂ ತ್ರಿಕೋನಮಿತಿ ಘಟಕವನ್ನು ಕಲಿಕೋಪಕರಣಗಳನ್ನು ಬಳಸಿಕೊಂಡು ಹೇಗೆ ಸುಲಭವಾಗಿ ವಿದ್ಯಾರ್ಥಿಗಳಿಗೆ ಕಲಿಸಬಹುದು ಎಂದು ತಿಳಿಸಿದರು.
ಹೊನ್ನಾವರ ತಾಲೂಕು ಜಿ.ಎಸ್. ನಾಯ್ಕ ಕ್ಷೇತ್ರಶಿಕ್ಷಣಾಧಿಕಾರಿ , ಕಾರವಾರ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಸದಸ್ಯ ಕಾರ್ಯದರ್ಶಿ ರೋಹನ್ ರಾಜೇಂದ್ರಜಿ ಭುಜ್ಲೆ , ಹೊನ್ನಾವರ ನ್ಯೂ ಇಂಗ್ಲೀಷ ಸ್ಕೂಲ್ ಮುಖ್ಯಾಧ್ಯಾಪಕ ಜಯಂತ ನಾಯಕ, ಹೊನ್ನಾವರ ತಾಲೂಕು ಪ್ರೌಢಶಾಲಾ ವಿಭಾಗದ ಶಿಕ್ಷಣ ಸಂಯೋಜಕ ಪ್ರಮೋದ ನಾಯ್ಕ, ಹಿರಿಯ ಗಣಿತ ಶಿಕ್ಷಕ ಆರ್.ಆರ್. ಹೆಗಡೆ, ಹೊನ್ನಾವರ ತಾಲೂಕು ಗಣಿತ ಶಿಕ್ಷಕರ ಸಂಘದ ಅಧ್ಯಕ್ಷ ದೇವನ್ ಬಾಂದೇಕರ್ ಉಪಸ್ಥಿತರಿದ್ದರು.
ಸೆ.24 ರಂದು ಭಟ್ಕಳದಲ್ಲಿ ನಡೆದ ಕಾರ್ಯಗಾರದಲ್ಲಿ ಭಟ್ಕಳ ತಾಲೂಕು ಪ್ರೌಢಶಾಲಾ ವಿಭಾಗದ ಶಿಕ್ಷಣ ಸಂಯೋಜಕಿ ಗೀತಾ ಟಿ. ನಾಯ್ಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕುಮಟಾ ಡಯೆಟ್ ಪ್ರಾಚಾರ್ಯ ಶಿವರಾಮ ಮಾತನಾಡಿ ಗಣಿತ ಅರ್ಥಮಾಡಿಕೊಂಡರೆ ಸುಲಭವಾದ ವಿಷಯ, ಯಾವುದೇ ಗಣಿತ ಕಬ್ಬಣದ ಕಡಲೆ ಅಲ್ಲಾ, ಪ್ರತಿಯೊಂದು ಕಾರ್ಯಾಗಾರಕ್ಕೆ ತನ್ನದೇ ಆದ ಪ್ರಾಮುಖ್ಯತೆ ಇರುತ್ತದೆ ಎಂದು ತಿಳಿಸಿದರು.
ಭಟ್ಕಳದ ಶಿರಾಲಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಡಿ.ಐ. ಮೊಗೇರ, ಭಟ್ಕಳ ಬ್ಲಾಕ್ ಸಂಪನ್ಮೂಲ ಕೇಂದ್ರದ ಸಂಯೋಜಕಿ ಪೂರ್ಣಿಮಾ ಮೊಗೇರ, ಕಾರವಾರ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಶೈಕ್ಷಣಿಕ ಸಹಾಯಕಿ ಕವಿತಾ ಮೇಸ್ತ, ಕುಮಟಾ ಡಯೆಟ್ ಉಪ ಪ್ರಾಚಾರ್ಯ ಜಿ.ಎಸ್.ಭಟ್, ಕುಮಟಾ ಡಯೆಟ್ ಉಪನ್ಯಾಸಕರಾದ ಸಂತೋಷ ಶೇಟ್, ಶ್ರೀ ಗಣೇಶ ನಾಯ್ಕ ಉಪಸ್ಥಿತರಿದ್ದರು.
ಈ ಎರಡೂ ಕಾರ್ಯಾಗಾರದಲ್ಲಿ 77 ಗಣಿತ ಶಿಕ್ಷಕರು ಭಾಗವಹಿಸಿದ್ದು, ಪ್ರಮಾಣ ಪತ್ರವನ್ನು ನೀಡಲಾಯಿತು.