Slide
Slide
Slide
previous arrow
next arrow

ಸಾಂಸ್ಕೃತಿಕ ಸ್ಪರ್ಧೆ: ಎಸ್‌ಡಿಎಂ ವಿದ್ಯಾರ್ಥಿಗಳ ಸಾಧನೆ

300x250 AD

ಹೊನ್ನಾವರ: ತಾಲೂಕಿನ ಹೋಲಿ ರೋಸರಿ ಕಾನ್ವೆಂಟ್ ಶಾಲೆ ಮತ್ತು ಸಂಯುಕ್ತ ಪಿಯು ಕಾಲೇಜಿನಲ್ಲಿ ಜರುಗಿದ ಹೊನ್ನಾವರ ತಾಲ್ಲೂಕಾ ಮಟ್ಟದ ಸಾಂಸ್ಕೃತಿಕ ಸಹಪಠ್ಯೇತರ ಚಟುವಟಿಕೆಗಳ ಸ್ಪರ್ಧೆಯಲ್ಲಿ ಎಂ.ಪಿ.ಇ. ಸೊಸೈಟಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ತೋರಿ ಗಮನಾರ್ಹ ಸಾಧನೆ ಮಾಡಿದ್ದಾರೆ.

ದ್ವಿತೀಯ ಪಿಯು ವಿಭಾಗದ, ಇಂಗ್ಲಿಷ್ ಚರ್ಚಾ ಸ್ಪರ್ಧೆಯಲ್ಲಿ ಕು.ರಮ್ಯಾ ನಾರಾಯಣ ಹೆಗಡೆ, ಆಶುಭಾಷಣದಲ್ಲಿ ಕು. ಉಷಾ ಕೃಷ್ಣ ನಾಯ್ಕ, ಭಾವಗೀತೆಯಲ್ಲಿ ಕು. ಇಂಚರಾ ಗೋಪಾಲ ನಾಯ್ಕ, ಜಾನಪದ ಗೀತ ಗಾಯನದಲ್ಲಿ ಕು. ಎಂ.ಜಿ.ಕಾವ್ಯ,  ಭಕ್ತಿಗೀತ ಗಾಯನದಲ್ಲಿ ಕು. ಶ್ರಾವಣಿ ಗೌರೀಶ ಹೆಗಡೆ ಪ್ರಥಮ ಸ್ಥಾನ,  ಪ್ರಥಮ ಪಿಯು ವಿಭಾಗದಲ್ಲಿ ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ಕು.ಪ್ರೀತಿ ಮಂಜು ಗೌಡ, ಇಂಗ್ಲಿಷ್ ಚರ್ಚಾ ಸ್ಪರ್ಧೆಯಲ್ಲಿ ಕು.ಕಾಂತಿ ಶಂಕರ ಹೆಗಡೆ, ಏಕಪಾತ್ರ ಅಭಿನಯದಲ್ಲಿ ಕು. ದೀಕ್ಷಿತಾ ಮಂಜುನಾಥ ಪಟಗಾರ, ಭಕ್ತಿಗೀತ ಗಾಯನದಲ್ಲಿ ಕು. ಭೂಮಿಕಾ ವೆಂಕಟೇಶ ಕಾಮತ್ ಪ್ರಥಮ ಸ್ಥಾನದೊಂದಿಗೆ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿವಿಧ ಚಟುವಟಿಕೆಗಳಲ್ಲಿ ಏಳು ದ್ವಿತೀಯ ಹಾಗೂ ಆರು ತೃತೀಯ ಸ್ಥಾನವನ್ನು ಗಳಿಸಿದ್ದಾರೆ.
ವಿವಿಧ ಚಟುವಟಿಕೆಯಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದ ಈ ಎಲ್ಲ ವಿದ್ಯಾರ್ಥಿಗಳನ್ನು ಕಾಲೇಜಿನ ಪ್ರಾಂಶುಪಾಲರಾದ ಎಂ.ಎಚ್.ಭಟ್, ಎಂ.ಪಿ.ಇ.ಸೊಸೈಟಿ ಆಡಳಿತ ಮಂಡಳಿಯ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಉಪನ್ಯಾಸಕ ವೃಂದ ಶುಭಕೋರಿದ್ದಾರೆ.
 

300x250 AD
Share This
300x250 AD
300x250 AD
300x250 AD
Back to top