ಕಾರವಾರ: ರೆಡ್ ಕ್ರಾಸ್ ಮತ್ತು ಯುವ ರೆಡ್ ಕ್ರಾಸ್ ಉತ್ತರ ಕನ್ನಡ ಜಿಲ್ಲಾ ಶಾಖೆ ವತಿಯಿಂದ ಜಾಗತಿಕ ಶಾಂತಿಗಾಗಿ ಹಮ್ಮಿಕೊಂಡಿದ್ದ Walk A Thon ಕಾರ್ಯಕ್ರಮಕ್ಕೆ ಧ್ವಜ ತೋರಿಸುವ ಮೂಲಕ ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ್ ಶನಿವಾರ ಚಾಲನೆ ನೀಡಿದರು.
ರೆಡ್‌ಕ್ರಾಸ್ ಉತ್ತರ ಕನ್ನಡ ಜಿಲ್ಲಾ ಶಾಖೆಯ ಚೇರ್ಮನ್ ವಿ.ಎಮ್.ಹೆಗಡೆ ಸ್ವಾಗತಿಸಿ ಕಾರ್ಯಕ್ರಮದ ಕುರಿತಾಗಿ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದ ಮುಖಾಂತರ ಮಾಲಾದೇವಿ ಮೈದಾನದಿಂದ ಸುಭಾಶಚಂದ್ರ ಬೋಸ್ ವೃತ್ತದ ಮೂಲಕ ವಿವಿಧ ಪೋಷಣೆಗಳೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಕಾರ್ಯಕ್ರಮ ಸಂಪನ್ನಗೊಂಡಿತು.
ಕಾರ್ಯಕ್ರಮದಲ್ಲಿ ಯುವ ರೆಡ್ ಕ್ರಾಸ್ ಅಧ್ಯಕ್ಷ ಸಚ್ಚಿದಾನಂದ ನಾಯ್ಕ, ರಾಜ್ಯ ಸಮಿತಿ ಸದಸ್ಯ ಸದಾನಂದ ನಾಯ್ಕ, ವಿಪತ್ತು ನಿರ್ವಹಣಾ ಘಟಕದ ಅಧ್ಯಕ್ಷ ಮಾಧವ ನಾಯಕ, ಮಹಿಳಾ ಮತ್ತು ಮಕ್ಕಳ ವಿಭಾಗದ ಖೈರುನ್ನಿಸಾ ಶೇಖ್, ಕಚೇರಿ ವ್ಯವಸ್ಥಾಪಕರಾದ ಯೋಗೇಶ ಶಾನಬಾಗ, ಅನಮೋಲ ರೇವಣಕರ, ಪ್ರಿತಮ ವೆರ್ಣೇಕರ್, ಆರ್.ಎಸ್. ನಾಯ್ಕ ಸಂದೀಪ ರೇವಣಕರ, ಅಲ್ತಾಫ್ ಶೇಖ್, ಎಲ್.ಕೆ.ನಾಯ್ಕ, ನೇಹಾ ಬಿರ್ಕೋಡಿಕರ ಮತ್ತಿತರರು ಭಾಗವಹಿಸಿದ್ದರು.