Slide
Slide
Slide
previous arrow
next arrow

ಪ್ರತಿಭಾ ಕಾರಂಜಿಯಲ್ಲಿ ಲಯನ್ಸ್ ಪ್ರತಿಭಾನ್ವಿತರ ಸಾಧನೆ

300x250 AD

ಶಿರಸಿ: ನಗರ ಪಶ್ಚಿಮ ವಲಯ ಪ್ರತಿಭಾ ಕಾರಂಜಿಯು ಇತ್ತೀಚೆಗೆ ನಗರದ ಪ್ರೋಗ್ರೆಸ್ಸಿವ್ ಪ್ರೌಢಶಾಲೆಯಲ್ಲಿ ಜರುಗಿತು. ಒಟ್ಟೂ 21 ಸ್ಪರ್ಧೆಗಳಿದ್ದು, 17 ಸ್ಪರ್ಧೆಗಳಲ್ಲಿ ಲಯನ್ಸ್ ಪ್ರೌಢಶಾಲೆಯ ವಿದ್ಯಾರ್ಥಿಗಳು ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.

ಭುವನಾ ಹೆಗಡೆ ಭರತನಾಟ್ಯದಲ್ಲಿ ಪ್ರಥಮ, ಚಿನ್ಮಯ್ ಕೆರೆಗದ್ದೆ ಸಂಸ್ಕೃತ ಭಾಷಣ ಹಾಗೂ ಕಾವ್ಯ ವಾಚನದಲ್ಲಿ ಪ್ರಥಮ, ನವ್ಯಾ ಹೆಗಡೆ ಆಶುಭಾಷಣದಲ್ಲಿ ದ್ವಿತೀಯ, ಲಾವಣ್ಯಾ ಹೆಗಡೆ ಸಂಸ್ಕೃತ ಧಾರ್ಮಿಕ ಪಠಣದಲ್ಲಿ ದ್ವಿತೀಯ, ಸಹನಾ ಭಟ್ಟ ಜಾನಪದ ಗೀತೆಯಲ್ಲಿ ದ್ವಿತೀಯ, ಅನನ್ಯಾ ದೇವಾಡಿಗ ರಂಗೋಲಿಯಲ್ಲಿ ದ್ವಿತೀಯ, ಸ್ಕಂದ ಶೆಟ್ಟಿ ಪ್ರಬಂಧ ಬರಹದಲ್ಲಿ ದ್ವಿತೀಯ ಸ್ಥಾನ, ಸಮನ್ವಿತಾ ತೆಂಬದಮನೆ ಮತ್ತು ನಿಶಾಂತ್ ಕೆ. ಸಿ. ಕ್ವಿಜ್‌ನಲ್ಲಿ ದ್ವಿತೀಯ ಸ್ಥಾನ, ಚಿನ್ಮಯ್ ಕೆರೆಗದ್ದೆ , ಪಾರ್ಥ, ಉಮ್ರಾ, ಮಿಸ್ಬಾ, ನೂ ಅಹಮದ್, ಸಿಂಚನಾ ಶೆಟ್ಟಿ ಕವಾಲಿಯಲ್ಲಿ ದ್ವಿತೀಯ ಸ್ಥಾನ, ಸಿಂಚನಾ ಶೆಟ್ಟಿ ಭಾವಗೀತೆಯಲ್ಲಿ ತೃತೀಯ, ಸಮೀಕ್ಷಾ ರಾಯ್ಕರ್ ಹಿಂದಿ ಭಾಷಣದಲ್ಲಿ ತೃತೀಯ, ರೆಯಾನ್ ಅರೇಬಿಕ್ ಧಾರ್ಮಿಕ ಪಠಣದಲ್ಲಿ ತೃತೀಯ, ಪೃಥ್ವಿ ಹೆಗಡೆ ಚಿತ್ರಕಲೆಯಲ್ಲಿ ತೃತೀಯ, ಸಂತೋಷಿ ಪಟಗಾರ ಚರ್ಚಾ ಸ್ಪರ್ಧೆಯಲ್ಲಿ ತೃತೀಯ, ಸೋನಂ ಶೆಟ್ಟಿ ಮಿಮಿಕ್ರಿಯಲ್ಲಿ ತೃತೀಯ ಸ್ಥಾನ, ಅದಿತಿ ನಾಯ್ಕ ಇಂಗ್ಲಿಷ್ ಭಾಷಣದಲ್ಲಿ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಭುವನಾ ಹೆಗಡೆ , ಚಿನ್ಮಯ ಕೆರೆಗೆದ್ದೆ ಇವರು ಭರತನಾಟ್ಯ, ಭಾಷಣ ಹಾಗೂ ಕಾವ್ಯವಾಚನ ಸ್ಪರ್ಧೆಯಲ್ಲಿ ತಾಲೂಕಾ ಮಟ್ಟದಲ್ಲೂ ಕೂಡ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ.

300x250 AD

ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿಯ ಮಾರ್ಗದರ್ಶಕರಾಗಿ ಶ್ರೀಮತಿ ಸೀತಾ ವಿ ಭಟ್ಟ ಹಾಗೂ ಮಕ್ಕಳ ನೇತೃತ್ವವನ್ನು ಶ್ರೀಮತಿ ಸುಜಾತಾ ವಝೆ ಮತ್ತು ಮೇಘನಾ ನೇತ್ರೇಕರ್ ಅವರು ವಹಿಸಿ ಮಕ್ಕಳನ್ನು ಪ್ರೋತ್ಸಾಹಿಸಿದರು. ಈ ಯಶಸ್ವಿಗೆ ಪ್ರಾಂಶುಪಾಲರು, ಶೈಕ್ಷಣಿಕ ಮುಖ್ಯಸ್ಥರು, ಶಿಕ್ಷಕ ಹಾಗೂ ಶಿಕ್ಷಕೇತರ ವೃಂದ, ಪಾಲಕ ಪೋಷಕರ ವೃಂದ, ಆಡಳಿತ ಮಂಡಳಿ ಶುಭ ಆಶೀರ್ವಾದವನ್ನು ಸೂಚಿಸಿದೆ.

Share This
300x250 AD
300x250 AD
300x250 AD
Back to top