ಶಿರಸಿ:ನಗರದ ಅರಣ್ಯ ಸಮುದಾಯ ಭವನದಲ್ಲಿ ನಡೆದ ಶಿರಸಿ ಶೈಕ್ಷಣಿಕ ಜಿಲ್ಲಾ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟದ ಚೆಸ್ ಮತ್ತು ಯೋಗ ಸ್ಪರ್ಧೆಯ ವಿಭಾಗದಲ್ಲಿ ಮಿಯಾರ್ಡ್ಸ ಚಂದನ ಆಂಗ್ಲ ಮಾಧ್ಯಮ ನರೇಬೈಲ್ನ 9ನೇ ವರ್ಗದ ಭೂಮಿಕಾ ಹೆಗಡೆ ಚೆಸ್ ಸ್ಪರ್ಧೆಯಲ್ಲಿ, 8ನೇ ವರ್ಗದ ಯಶಸ್ ಮರಾಠಿ ರಿದಮಿಕ್ ಯೋಗ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಿಂದ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳಿಗೆ ಮತ್ತು ಮಾರ್ಗದರ್ಶಿ ಶಿಕ್ಷಕರಿಗೆ ಆಡಳಿತಮಂಡಳಿ, ಶಿಕ್ಷಕರು, ಪಾಲಕರು ಅಭಿನಂದಿಸಿದ್ದಾರೆ.
ಚೆಸ್, ಯೋಗ ಸ್ಪರ್ಧೆಯಲ್ಲಿ ಚಂದನ ವಿದ್ಯಾರ್ಥಿಗಳು ವಿಭಾಗ ಮಟ್ಟಕ್ಕೆ
