Slide
Slide
Slide
previous arrow
next arrow

ತಾರತಮ್ಯವಿಲ್ಲದೇ ಸಮನಾಗಿ ಬದುಕುವುದೇ ಸಂವಿಧಾನದ ಆಶಯ: ಸಚಿವ ವೈದ್ಯ

300x250 AD

ಹೊನ್ನಾವರ:ಯಾರೂ ತಾರತಮ್ಯವಿಲ್ಲದೇ ಬದುಕಬೇಕು ಎಂಬುದೇ ಸಂವಿಧಾನದ ಆಶಯ. ದೇಶದಲ್ಲಿ ಸಮಾನತೆ, ಗೌರವದಿಂದ ಬಾಳಲು ಸಾಧ್ಯವಾಗಿರುವುದಕ್ಕೆ ಡಾ. ಬಾಬಾಸಾಹೇಬ್ ಅಂಬೇಡ್ಕರರವರು ರಚಿಸಿದ ಸಂವಿಧಾನದಿಂದಲೇ ಸಾಧ್ಯವಾಗಿದೆ ಎಂದು ಮೀನುಗಾರಿಕೆ, ಬಂದರು, ಒಳನಾಡು ಸಾರಿಗೆ ಸಚಿವ ಮಂಕಾಳ ವೈದ್ಯ ಹೇಳಿದರು.

ಹೊನ್ನಾವರದಲ್ಲಿ ಮೂಡಗಣಪತಿ ಸಭಾಭವನದಲ್ಲಿ ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ ಭಾನುವಾರ ನಡೆದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಸಭಾಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಎಲ್ಲರೂ ಒಗ್ಗಟ್ಟಾಗಿ ಬದುಕುವುದೇ ಮಾನವಧರ್ಮ. ಅದೇ ಸಂವಿಧಾನದ ಉದ್ದೇಶ. ಪ್ರತಿಯೊಬ್ಬರಲ್ಲೂ ಪ್ರಜಾಪ್ರಭುತ್ವದ ಬಗ್ಗೆ , ಸಂವಿಧಾನದ ಬಗ್ಗೆ ಅರಿವು ಮೂಡಿಸಿದಾಗ ದೇಶ ಬಲಿಷ್ಠವಾಗುವುದು ಎಂದರು.

ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯ ಪ್ರಾಸ್ತಾವಿಕ ಮಾತನಾಢಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಹಳಿಯಾಳದ ಚೆಕ್ ಪೋಸ್ಟ್‌ನಿಂದ ಭಟ್ಕಳದ ಗೊರಟೆವರೆಗೆ 253 ಕಿ.ಮೀ. ಉದ್ದದ ಮಾನವ ಸರಪಳಿ ರಚಿಸಲಾಗಿದೆ. 1 ಲಕ್ಷಕ್ಕಿಂತ ಹೆಚ್ಚು ಜನರು ಈ ಸರಪಳಿಯಲ್ಲಿ ಭಾಗವಹಿಸಿದ್ದಾರೆ ಎಂದರು.
ಅಂಕೋಲಾ ಗೋಖಲೆ ಸೆಂಟನರಿ ಕಾಲೇಜಿನ ಪ್ರಾಚಾರ್ಯ ಡಾ.ಸಿದ್ದಲಿಂಗಸ್ವಾಮಿ ವಸ್ತ್ರದ ಪ್ರಜಾಪ್ರಭುತ್ವದ ಕುರಿತು ಉಪನ್ಯಾಸ ನೀಡಿ ಅನುಭವ ಮಂಟಪ ಜಗತ್ತಿನ ಮೊದಲ ಸಂಸತ್ತು. ಉತ್ತಮ ಆದರ್ಶಗಳ ಮೊತ್ತವೇ ನಮ್ಮ ಸಂವಿಧಾನ ಎಂದರು.

ವೇದಿಕೆಯಲ್ಲಿ ಪ.ಪಂ. ಅಧ್ಯಕ್ಷ ನಾಗರಾಜ ಭಟ್, ಉಪಾಧ್ಯಕ್ಷ ಸುರೇಶ ಹೊನ್ನಾವರ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರಕುಮಾರ ಕಾಂದೂ, ಹೆಚ್ಚುವರಿ ಎಸ್.ಪಿ. ಸಿ.ಟಿ.ಜಯಕುಮಾರ, ಜಿ.ಪಂ. ಮುಖ್ಯಯೋಜನಾಧಿಕಾರಿ ವಿನೋದ ಅಣ್ವೇಕರ, ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ ರಜಪೂತ, ಡಿಡಿಪಿಐ ಲತಾ ನಾಯಕ, ಉಪಕಾರ್ಯದರ್ಶಿ ನಾಗೇಶ ರಾಯ್ಕರ ಮತ್ತಿತರರು ಉಪಸ್ಥಿತರಿದ್ದರು.

300x250 AD

ಸ್ವಚ್ಚತೆಯೇ ಸೇವೆ ೨೦೨೪ ಕಾರ್ಯಕ್ರಮಕ್ಕೆ ಈ ಸಂದರ್ಭದಲ್ಲಿ ಚಾಲನೆ ನೀಡಲಾಯಿತು. ಸಂವಿಧಾನಕ್ಕೆ ಬದ್ದರಾಗಿರುವ ಕುರಿತು ಹಾಗೂ ಸ್ವಚ್ಛತೆ ಕಾಪಾಡುವ ಕುರಿತು ಪ್ರತಿಜ್ಞಾವಿಧಿ ಬೋಧಿಸಲಾಯಿತು. ಯುವಜನ ಸೇವಾ ಇಲಾಖಾಧಿಕಾರಿ ಸುಧೀಶ ನಾಯ್ಕ ಸಂಗಡಿಗರು ಕಾರ್ಯಕ್ರಮ ನಿರ್ವಹಿಸಿದರು.

ಮಾನವ ಸರಪಳಿಗೆ ಚಾಲನೆ: ಹೊನ್ನಾವರದ ಕಾಲೇಜು ಸರ್ಕಲ್‌ನಲ್ಲಿ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ಅವರ ಉಪಸ್ಥಿತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮಾನವ ಸರಪಳಿಗೆ ಕೈಜೋಡಿಸುವ ಮೂಲಕ ಚಾಲನೆ ನೀಡಿದರು. ಕೈ ಎತ್ತಿ ಜೈ ಹಿಂದ್, ಜೈ ಕರ್ನಾಟಕ ಘೋಷಣೆಗಳು ಮೊಳಗಿದವು. ಸಂವಿಧಾನದ ಪಾಲನೆ ಕುರಿತು ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.

ಹೊನ್ನಾವರ ತಾಲೂಕಿನಲ್ಲಿ ಬಡಗಣಿ ಸೇತುವೆಯ ಬಳಿಯಿಂದ ಅನಂತವಾಟಡಿ ಕ್ರಾಸ್ ತನಕ ೩೬ ಕಿ.ಮೀ. ಉದ್ದದ ಮಾನವ ಸರಪಳಿ ರಚಿಸಲಾಗಿತ್ತು. ವಿದ್ಯಾರ್ಥಿಗಳು, ಶಿಕ್ಷಕರು, ವಿವಿಧ ಸಂಘಟನೆಗಳು, ಅಧಿಕಾರಿಗಳು, ಸಿಬ್ಬಂದಿಗಳು ಅಂಗನವಾಡಿ ಕಾರ್ಯಕರ್ತೆಯರು, ಸಾರ್ವಜನಿಕರು ಸೇರಿದಂತೆ ೨೬ ಸಾವಿರ ಜನರು ಈ ಸರಪಳಿಯಲ್ಲಿ ಭಾಗವಹಿಸಿದ್ದರು. ಉಸ್ತುವಾರಿಯನ್ನು ನೋಡಿಕೊಳ್ಳಲು ಪ್ರತಿ ಕಿ.ಮೀ.ಗೆ ಒಬ್ಬರಂತೆ ನೋಡಲ್ ಅಧಿಕಾರಿಯವರನ್ನು ನೇಮಿಸಲಾಗಿತ್ತು

Share This
300x250 AD
300x250 AD
300x250 AD
Back to top