Slide
Slide
Slide
previous arrow
next arrow

ಶಿರಳಗಿ ಹಾಲು ಉತ್ಪಾದಕ ಸಂಘಕ್ಕೆ 1.92 ಲಕ್ಷ.ರೂ ನಿವ್ವಳ ಲಾಭ

300x250 AD

ಸಿದ್ದಾಪುರ: ತಾಲೂಕಿನ ಶಿರಳಗಿ ಹಾಲು ಉತ್ಪಾದಕರ ಸಂಘ 2023-24ನೇ ಸಾಲಿನಲ್ಲಿ 1ಲಕ್ಷದ 92ಸಾವಿರದ 831ರೂಗಳಷ್ಟು ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಶ್ರೀಕಾಂತ ಎಲ್. ಭಟ್ಟ ಹೇಳಿದರು.

ಶಿರಳಗಿ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ಆಯೋಜಿಸಿದ್ದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ವಾರ್ಷಿಕ ವರದಿ ಮಂಡಿಸಿ ಅವರು ಶುಕ್ರವಾರ ಮಾತನಾಡಿದರು. ಸಂಘದಲ್ಲಿ 137 ಸದಸ್ಯರಿದ್ದು 21850 ರೂ. ಷೇರು ಬಂಡವಾಳ ಹೊಂದಿರುತ್ತದೆ. ಸಂಘವು ಪ್ರಸಕ್ತ ವರ್ಷ 56383 ಲೀಟರ್ ಹಾಲನ್ನು ಖರೀದಿಸಿ 10706 ಲೀಟರ್ ಹಾಲನ್ನು ಸ್ಥಳೀಯ ಮಾರಾಟ ಮಾಡಿದೆ.
48005 ಕೆ.ಜಿ ಹಾಲನ್ನು ಧಾರವಾಡ ಹಾಲು ಒಕ್ಕೂಟಕ್ಕೆ ಮಾರಾಟ ಮಾಡಿದ್ದು 889379 ರೂ.ಗಳ ಪಶು ಆಹಾರ ಹಾಗೂ 9000ರೂಗಳ ಖನಿಜ ಮಿಶ್ರಣ ಖರೀದಿಸಿ ಸಂಘದಲ್ಲಿ ಮಾರಾಟ ಮಾಡಲಾಗಿದೆ. ಒಕ್ಕೂಟದಲ್ಲಿ 1ಲಕ್ಷದ 66ಸಾವಿರದ 448ರೂಗಳಷ್ಟು ಸಂಘದ ಷೇರು ಬಂಡವಾಳ ಇರುತ್ತದೆ. ಈ ವರ್ಷ ಸಂಘದ ಎಲ್ಲ ಸದಸ್ಯರಿಗೆ ಡಿವಿಡೆಂಡ್ ಹಾಗೂ ಬೋನಸ್ ನೀಡಲಾಗುತ್ತದೆ ಎಂದು ಹೇಳಿದರು.
ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಪಿ.ವಿ ನಾಯ್ಕ ಬೇಡ್ಕಣಿ ಮಾತನಾಡಿದರು.

300x250 AD

ಇದೇ ಸಂದರ್ಭದಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ಪೂರೈಕೆ ಮಾಡಿದ ಸದಸ್ಯರಿಗೆ ಹಾಲಿನ ಖ್ಯಾನನ್ನು ನೀಡಲಾಯಿತು.ಅಲ್ಲದೇ ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕಪಡೆದ 3ವಿದ್ಯಾರ್ಥಿಗಳಿಗೆ, ಸಿ.ಎ ಪರೀಕ್ಷೆಯಲ್ಲಿ ತೇರ್ಗಡೆ ಹೊಂಡಿದ ವಿದ್ಯಾರ್ಥಿಗೆ ಪ್ರೋತ್ಸಾಹಧನ ನೀಡಿ ಗೌರವಿಸಲಾಯಿತು.
ತಾಲೂಕು ವಿಸ್ತರಣಾಧಿಕಾರಿ ಪ್ರಕಾಶ ಕೆ, ಸಂಘದ ಉಪಾಧ್ಯಕ್ಷ ಧರ್ಮೇಶ ನಾಯ್ಕ, ಸದಸ್ಯರಾದ ಸುರೇಂದ್ರ ಶಿವಾಜಿ ಗೌಡ, ಅಣ್ಣಪ್ಪ ಮಹಾಬಲ ನಾಯ್ಕ, ಅನಿಲ್ ಕೆ. ಶೀಗೆಹಳ್ಳಿ, ನಾಗರಾಜ ರಾಮ ಭಟ್, ಶ್ರೀನಿವಾಸ ಹೇರಂಭ ಭಟ್, ಪಾರ್ವತಮ್ಮ ಮಾದೇವ ಗೌಡರ್, ವೀರಭದ್ರ ಕೆ. ಗೌಡರ್ ಉಪಸ್ಥಿತರಿದ್ದರು.ಸಂಘದ ಕಾರ್ಯನಿರ್ವಾಹಕ ಮಂಜುನಾಥ ಎಚ್. ನಾಯ್ಕ ವಾರ್ಷಿಕ ಲೆಕ್ಕ ಪತ್ರ ಮಾಹಿತಿ ನೀಡಿದರು. ಅನಿಲ್ ಕೆ. ಶೀಗೆಹಳ್ಳಿ ವಂದಿಸಿದರು.

Share This
300x250 AD
300x250 AD
300x250 AD
Back to top